ಕೊಪ್ಪಳ: ನಗರದಲ್ಲಿ ಕೇರಳ ಮಾಂತ್ರಿಕನೊಬ್ಬ ಮಹಿಳೆಯರನ್ನು ವಶೀಕರಣ ಮಾಡ್ಕೊಂಡು ಅನೈತಿಕ ಚಟುವಟಿಕೆ ನಡೆಸ್ತಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.
ಡೋಂಗಿ ಮಾಂತ್ರಿಕ ಮಸ್ತಾನ್ ಅನ್ನೋನು ಹೊಸಳ್ಳಿಯ ಮನೆಯಲ್ಲಿ ವಾಸವಾಗಿ ದಂಧೆ ನಡೆಸುತ್ತಿದ್ದಾನೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಇದಕ್ಕೆ ಸಾಕ್ಷಿಯಾಗಿ ಮಾಂತ್ರಿಕ ಬಾಬಾ ವಾಸವಾಗಿದ್ದ ಮನೆಯಲ್ಲಿ ಅಪಾರ ಪ್ರಮಾಣದ ಕಾಂಡೋಮ್ ಪ್ಯಾಕೇಟ್ಗಳು, ಮಹಿಳೆ, ಹುಡುಗಿಯರ ಫೋಟೋಗಳು ಪತ್ತೆಯಾಗಿವೆ.

ಈ ಬಾಬಾನ ಬಗ್ಗೆ ಅನುಮಾನಗೊಂಡ ಸ್ಥಳೀಯರು ಕಳೆದ ದಿನ ಮುನಿರಾಬಾದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಪೊಲೀಸರು ಬರುವ ಮುನ್ನವೇ ಮಾಂತ್ರಿಕ ಬಾಬಾ ಎಸ್ಕೇಪ್ ಆಗಿದ್ದಾನೆ. ನಿಧಿ ಆಸೆಗಾಗಿ ಏನೂ ಅರಿಯದ ಪುಟ್ಟ ಬಾಲಕಿಯನ್ನು ಬಲಿ ಕೊಟ್ಟ ಪ್ರಕರಣ ಗ್ರಾಮದಲ್ಲಿ ಮಾಸುವ ಮುನ್ನವೇ ಅದೇ ಮನೆಯಲ್ಲಿ ಮತ್ತೆ ನಕಲಿ ಬಾಬಾ ವಾಸವಾಗಿವಾಗಿರೋದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿದೆ.
ಕಾಮಿ ಸ್ವಾಮಿ ವಿರುದ್ಧ ಪ್ರತಿಭಟನೆ: ಯುವತಿಯೊಬ್ಬಳ ಜೊತೆಗೆ ಬೆಡ್ನಲ್ಲಿ ಸರಸವಾಡಿ ಸಿಕ್ಕಿಬಿದ್ದಿರುವ ಬೆಂಗಳೂರಿನ ಕಾಮಿ ಸ್ವಾಮೀಜಿ ದಯಾನಂದನ ವಿರುದ್ಧ ಮಠದ ಭಕ್ತಾದಿಗಳು ಆಹೋರಾತ್ರಿ ಧರಣಿ ನಡೆಸಿದ್ದಾರೆ. ಬೆಂಗಳೂರಿನ ಹುಣಸೆಮಾರನಳ್ಳಿಯಲ್ಲಿರುವ ಜಂಗಮ ಮಠದ ಮುಂದೆ ಧರಣಿ ಕೂತು ಧಿಕ್ಕಾರ ಕೂಗಿದ್ರು. ಕಾಣೆಯಾಗಿರುವ ಕಾಮಿಸ್ವಾಮಿಯನ್ನು ಬಂಧಿಸುವಂತೆ ಆಗ್ರಹಿಸಿದ್ರು. ಜೊತೆಗೆ ಮಠವನ್ನು ಅತಿಕ್ರಮಿಸಿಕೊಂಡಿರುವ ದಯಾನಂದ್ ಕುಟುಂಬವನ್ನು ಹೊರಹಾಕುವಂತೆ ಒತ್ತಾಯಿಸಿದ್ರು. ರಂಭಾಪುರಿ ಜಗದ್ಗುರು ಮತ್ತು ಶ್ರೀಶೈಲ ಜಗದ್ಗುರುಗಳು ಮಠಕ್ಕೆ ಬರಬೇಕೆಂದು ಆಗ್ರಹಿಸಿದ್ರು.
https://www.youtube.com/watch?v=Wju-SCH4x1s

















Leave a Reply