ಹೆಡ್ ಮಾಸ್ಟರ್ ನಿಂದ್ಲೇ ರೇಪ್- ಗರ್ಭಿಣಿಯಾಗಿದ್ದಕ್ಕೆ ಗ್ರಾಮದಿಂದಲೇ ಬಾಲಕಿ ಕುಟುಂಬಕ್ಕೆ ಬಹಿಷ್ಕಾರ

ಭುವನೇಶ್ವರ್: ಮೂರು ವಾರಗಳ ಹಿಂದೆ ಶಾಲೆಯ ಮುಖ್ಯೋಪಾದ್ಯಾಯನೊಬ್ಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭವತಿ ಮಾಡಿ ಜೈಲಿಗೆ ಹೋದ ಘಟನೆ ಒಡಿಶಾದ ಕೊರತ್ ಪುತ್ ಜಿಲ್ಲೆಯಲ್ಲಿ ನಡೆದಿದೆ.

ಮದುವೆಯ ಮುಂಚೆ ಬಾಲಕಿ ಗರ್ಭವತಿ ಆಗಿರುವ ವಿಷಯ ತಿಳಿದು ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಅಕ್ಟೋಬರ್ ತಿಂಗಳ ಮೊದಲು ಕೊರತ್ ಪುತ್ ಜಿಲ್ಲೆಯ ನಂದಾಪುರ್ ಬ್ಲಾಕ್ ನ ಬಾಲ್ದಾ ಸರ್ಕಾರಿ ಶಾಲೆಯ ಮುಖ್ಯೋಪಾದ್ಯಾಯ 9ನೇ ತರಗತಿಯ ಬಾಲಕಿಯನ್ನು ಅತ್ಯಾಚಾರ ಮಾಡಿ ಅವಳನ್ನು ಗರ್ಭವತಿ ಮಾಡಿಸಿದ್ದಕ್ಕೆ ಆತನನ್ನು ಬಂಧಿಸಿದ್ದರು.

ದೈಹಿಕವಾಗಿ ನನ್ನ ಜೊತೆ ನೀನು ಸಂಬಂಧವಿಟ್ಟುಕೊಳ್ಳಬೇಕು ಎಂದು ಬಾಲಕಿಗೆ ಕಿರುಕುಳ ನೀಡುತ್ತಿದ್ದನು. ಈ ವಿಷಯ ತಿಳಿದ ಬಾಲಕಿಯ ತಂದೆ ಮುಖ್ಯೋಪಾದ್ಯಾಯ ಬಿದುಬೂಷಣ್ ನಾಯಕ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

5 ತಿಂಗಳು ಗರ್ಭಿಣಿ ಆಗಿದ್ದ ಬಾಲಕಿಯನ್ನು ಪೋಷಕರು ವೈದ್ಯರ ಹತ್ತಿರ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದರು. ಬಾಲಕಿಯ ಆರೋಗ್ಯದ ಬಗ್ಗೆ ಪೋಷಕರು ಚಿಂತಿಸುತ್ತಿರುವಾಗಲೇ, ಇತ್ತ ಮದುವೆಗೆ ಮೊದಲೇ ಬಾಲಕಿ ಗರ್ಭವತಿ ಆಗಿರುವುದಕ್ಕೆ ಗ್ರಾಮಸ್ಥರು ಬಾಲಕಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ ಮತ್ತು ಸಮುದಾಯದ ದಂಡ ಕಟ್ಟಲು ಹೇಳಿದ್ದಾರೆ.

ನಾನು ಒಬ್ಬ ಕೂಲಿ ಕಾರ್ಮಿಕ. ಸಮುದಾಯದ ದಂಡ ಸುಮಾರು ರೂ. 30,000 ಇರುತ್ತದೆ. ನಾನು ಅಷ್ಟು ದೊಡ್ಡ ಮೊತ್ತ ಹೇಗೆ ಕೊಡಲಿ. ನನ್ನ ಮಗಳ ಆರೋಗ್ಯ ತಪಾಸಣೆಗೆ ನನಗೆ ದುಡ್ಡು ಬೇಕಾಗಿದೆ ಎಂದು ಬಾಲಕಿಯ ತಂದೆ ಮಾಧ್ಯಮದ ಮುಂದೆ ತಮ್ಮ ಅಳಲುತೋಡಿಕೊಂಡಿದ್ದಾರೆ.

ಈ ಸಂಬಂಧದ ಬಗ್ಗೆ ಮಾತನಾಡಿದ ಕೊರತ್ ಪುತ್ ಜಿಲ್ಲಾ ಆಡಳಿತದ ಅಧಿಕಾರಿಯಾದ ಜಗನ್ನಾಥ್ ಸೋರೆನ್, ಬಾಲಕಿಯ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *