ನೀವೆಂದೂ ನೋಡಿರದ ಕ್ಯಾಂಡಲ್‍ಗಳು, ಒಮ್ಮೆ ನೋಡಿದರೆ ನೀವೇ ತೆಗೆದುಕೊಳ್ಳೋಕೆ ಹೋಗ್ತಿರಾ !

ಮಡಿಕೇರಿ: ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಮನೆಮಾಡಿದೆ. ದೀಪಗಳನ್ನು ಬೆಳಗಿಸೋ ಮೂಲಕ ಸಂಭ್ರಮಿಸುತ್ತಿರೋರಿಗೆ ಕ್ಯಾಂಡಲ್ ದೀಪಗಳೂ ಕೈಬೀಸಿ ಕರೆಯುತ್ತಿವೆ. ಬಣ್ಣ ಬಣ್ಣದ ವೆರೈಟಿ ವೆರೈಟಿ ಕ್ಯಾಂಡಲ್ ಗಳೂ ದೀಪಾವಳಿಗಾಗಿ ಸಿದ್ದಗೊಂಡಿದ್ದು ಗ್ರಾಹಕರ ಮನಸ್ಸಿಗೆ ಇಷ್ಟವಾಗೂ ಎಲ್ಲ ರೀತಿಯ ಮೊಂಬತ್ತಿಗಳು ಒಮ್ಮೆ ನೋಡಿದರೆ ಬಿಟ್ಟು ಹೋಗೊ ಮನಸ್ಸಾಗುವುದಿಲ್ಲ.

ಹೌದು, ಕೊಡಗು ಜಿಲ್ಲೆ ವಿರಾಜಪೇಟೆಯಿಂದ ಗೋಣಿಕೊಪ್ಪಾಗೆ ಹೋಗೋ ರಸ್ತೆಯಲ್ಲಿ ಸಿಗುವ ಈ ಕ್ಯಾಂಡಲ್ ಶಾಪ್ ಪ್ರವಾಸಿಗರ ನೆಚ್ಚಿನ ಶಾಪಿಂಗ್ ಸ್ಥಳ. ಪುಟ್ಟ ಪುಟ್ಟ ಬಣ್ಣ ಬಣ್ಣದ ಕ್ಯಾಂಡಲ್ ಗಳಿಂದ ಹಿಡಿದು ಗೊಂಬೆ, ಹಕ್ಕಿ, ಹೂ, ಬಾಲ್, ಹೃದಯ, ಹಕ್ಕಿ, ಮರಗಿಡ, ಹೀಗೆ ನಾನಾ ಬಗೆಯ ಸುಮಾರು 70 ವೆರೈಟಿ ಕ್ಯಾಂಡಲ್ ಇಲ್ಲಿ ತಯಾರಾಗುತ್ತಿದ್ದು, ಮನೆಯ ಅಂದ ಹೆಚ್ಚಿಸೋ ತರಹೇವರಿ ಕ್ಯಾಂಡಲ್ ಗಳು ಎಲ್ಲರ ಗಮನ ಸೆಳೆಯುತ್ತಿವೆ.

ಕೊಡಗಿನ ಶ್ರೀನಿವಾಸ ಪ್ರಸಾದ್ ದಂಪತಿ ಕೇವಲ ಬೆಳಕು ನೀಡೋ ಕ್ಯಾಂಡಲ್ ತಯಾರಿಸಿದ್ರೆ ಗ್ರಾಹಕರನ್ನು ಸೆಳೆಯೋದು ಕಷ್ಟ ಎಂಬುದರಿತು ಸುಮಾರು 70 ಬಗೆಯ ವಿವಿಧ ವಿನ್ಯಾಸದ ಕ್ಯಾಂಡಲ್‍ಗಳನ್ನು ತಯಾರಿಸುತ್ತಿದ್ದಾರೆ. ಒಂದೊಂದು ಕ್ಯಾಂಡಲ್ ಗಳು ಒಂದೊಂದು ಆಕಾರದಲ್ಲಿ ಕಂಗೊಳಿಸುತ್ತಾ ನೋಡುಗರನ್ನು ಆಕರ್ಷಿಸುತ್ತವೆ. ವಿಶೇಷವಾಗಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಬಣ್ಣ ಬಣ್ಣದ ಕ್ಯಾಂಡಲ್ ಗಳಿಗೆ ಬೇಡಿಕೆ ಬಂದಿದ್ದು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

10 ರೂಪಾಯಿಂದ ಪ್ರಾರಂಭಗೊಂಡು ಎರಡು ಸಾವಿರದ ವರೆಗಿನ ಮೌಲ್ಯದ ಕ್ಯಾಂಡಲ್ ಗಳು ಇಲ್ಲಿ ಸಿಗುತ್ತವೆ.

Comments

Leave a Reply

Your email address will not be published. Required fields are marked *