ರೋಷನ್ ಬೇಗ್ ಬೆಳೆದ ವಾತಾವರಣದಲ್ಲಿ ಒಂದು ಸಂಸಾರ, ಒಂದು ಹೆಂಡತಿ ಕಲ್ಪನೆ ಬಹಳ ವಿರಳ: ಪ್ರತಾಪ್ ಸಿಂಹ

ಮೈಸೂರು: ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲಾ ಹಳದಿ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿ ಅವರ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಸಚಿವ ರೋಷನ್ ಬೇಗ್ ಮೇಲೆ ಕಿಡಿ ಕಾರಿದ್ದಾರೆ.

ರೋಷನ್ ಬೇಗ್ ಬೆಳೆದ ವಾತಾವರಣದಲ್ಲಿ ಒಂದು ಸಂಸಾರ, ಒಂದು ಹೆಂಡತಿ ಈ ರೀತಿಯ ಕಲ್ಪನೆಯೇ ಬಹಳ ವಿರಳ. ಬಹುಶಃ ಅವರ ಹಿನ್ನೆಲೆಯಲ್ಲೂ ಈ ಥರದ ಸಮಸ್ಯೆ ಇದೆ ಅಂತಾ ಕಾಣಿಸುತ್ತದೆ. ಹಾಗಾಗಿ ಎಲ್ಲರೂ ಕೂಡ ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲಾ ಹಳದಿ ಅಂತರಲ್ಲಾ ಹಾಗಾಗಿದೆ ಅನ್ನಿಸುತ್ತದೆ ಎಂದು ವ್ಯಂಗ್ಯವಾಗಿ ಹೇಳಿದರು.

ಮಾತನ್ನು ಮುಂದುವರಿಸಿ, ಆದರೆ ರೋಷನ್ ಬೇಗ್ ಅವರು ಶಿವಾಜಿನಗರದ ಶಾಸಕರಾಗಿದ್ದು, ಶಿವಾಜಿ ಮಹಾರಾಜ ತನ್ನ ತಾಯಿ ಜೀಜಾಬಾಯಿಯಿಂದ ಪ್ರೇರೇಪಿತನಾಗಿ ಬಹುದೊಡ್ಡ ಖ್ಯಾತಿಯನ್ನು ಪಡೆದಿದ್ದಾರೆ. ಅಂತಹ ಕ್ಷೇತ್ರದ ಪ್ರತಿನಿಧಿಯಾಗಿ ಈ ರೀತಿ ತಾಯಿಯ ಬಗ್ಗೆ ನಿಂದಿಸುವಂಹತ ಮಾತುಗಳನ್ನು ಆಡಿರುವುದು ನಿಜಕ್ಕೂ ಕೂಡ ಖೇದಕರ. ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದರು.

ನೋಟ್ ನಿಷೇಧದ ಬಗ್ಗೆ ಬಹಳ ಕೋಪತಾಪವನ್ನು ವ್ಯಕ್ತಪಡಿಸಿದ್ದಾರೆ. ಹಗರಣಗಳಲ್ಲಿ ದುಡ್ಡು ಮಾಡಿರುವ ಭ್ರಷ್ಟರು, ಭ್ರಷ್ಟರಾಜಕಾರಣಿಗಳು ಇರಬಹುದು. ತೆಲಗಿಯ ನಕಲಿಯ ಚಾಪ ಕಾಗದಲ್ಲಿ ಸಾವಿರಾರು ಕೋಟಿ ರೂ. ಮಾಡಿರೋರು ಇರಬಹುದು, ಇಂತಹವರಿಗೆ ನೋಟು ರದ್ದತಿಯಿಂದ ತೊಂದರೆ ಆಯ್ತೆ ವಿನಾಃ ಸಾಮಾನ್ಯ ಜನರಿಗಲ್ಲ. ಬಹಶಃ ರೋಷನ್ ಬೇಗ್ ಅವರಿಗೆ ಈ ರೀತಿ ಮಾತನಾಡಬೇಕು ಎಂದರೆ ಬಹಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ ಅನ್ನಿಸುತ್ತದೆ ಎಂದು ಹೇಳಿದರು.

ಇದನ್ನು ಓದಿ: ಮೋದಿಯನ್ನು ‘ಸೂ.. ಬೋ..’ ಎಂದು ತಮಿಳಲ್ಲಿ ಅವಾಚ್ಯವಾಗಿ ನಿಂದಿಸಿದ ಸಚಿವ ರೋಷನ್ ಬೇಗ್!

Comments

Leave a Reply

Your email address will not be published. Required fields are marked *