ಬೆಸೆದ ಬಂಧಗಳನ್ನು ಗಟ್ಟಿ ಮಾಡೋಕೆ 4 ವರ್ಷ ನಂತರ ಟಿವಿಯಲ್ಲಿ ಬರ್ತಿದ್ದಾರೆ ಅಪ್ಪು!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 4 ವರ್ಷಗಳ ಬ್ರೇಕ್ ಬಳಿಕ ಟಿವಿ ಶೋ ನಡೆಸಲು ಬರುತ್ತಿದ್ದಾರೆ. ಈ ಹೊಸ ಫ್ಯಾಮಿಲಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ಈ ಕಾರ್ಯಕ್ರಮದ ಪ್ರೋಮೋ ಶೂಟನ್ನು ಪುನೀತ್ ರಾಜ್ ಕುಮಾರ್ ಈಗಾಗಲೇ ಮುಗಿಸಿದ್ದಾರೆ. ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಈ ಕಾರ್ಯಕ್ರಮದ 5 ನಿಮಿಷಗಳ ಪ್ರೋಮೋ ರಿಲೀಸ್ ಆಗಿದೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಬಾರಿ ಜನರು ಈ ಪ್ರೋಮೋ ನೋಡಿದ್ದಾರೆ.

ನೂತನ ಶೋದ ಹೆಸರು ಹಾಗೂ ವಿಶೇಷತೆಯನ್ನು ಚಾನೆಲ್ ಎಲ್ಲೂ ಬಿಟ್ಟುಕೊಟ್ಟಿಲ್ಲ.ಜೊತೆಯಲ್ಲಿ ಪುನೀತ್ ಅವರೂ ಹೇಳಲಿಲ್ಲ. ಆದರೆ ಈ ಪ್ರೋಮೋದ ಕೊನೆಯಲ್ಲಿ ಮಾತ್ರ ಬರ್ತಿದೆ ಬೆಸೆದ ಸಂಬಂಧಗಳನ್ನು ಗಟ್ಟಿ ಮಾಡೋ ಹೊಸ ಶೋ ಎಂಬ ಧ್ವನಿ ಕೇಳಿಸುತ್ತಿದೆ.

ತುಂಬಾ ಸೀಕ್ರೆಟ್ ಆಗಿ ಕಾರ್ಯಕ್ರಮದ ಶೂಟ್ ನಡೆಯುತ್ತಿದೆ. ಈ ಹೊಸ ಶೋಗಾಗಿ ಪುನೀತ್ ರಾಜ್ ಕುಮಾರ್ ಫೋಟೋ ಶೂಟ್ ಕೂಡಾ ನಡೆಯಿತು.

ಟಿವಿ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ ನನಗೆ ಎಕ್ಸೈಟ್ಮೆಂಟ್ ಅಂತೂ ಇದ್ದೇ ಇದೆ. ಶೋ ಯಾವ ಥರಾ ಇರುತ್ತೆ, ಹೇಗೆ ನಡೆಸ್ಕೊಂಡು ಹೋಗ್ತೀವಿ. ಗೆಸ್ಟ್ ಗಳು ಏನೆಲ್ಲಾ ಹೇಳ್ತಾರೆ ಅನ್ನೋದೇ ಒಂಥರಾ ಥ್ರಿಲ್ ಎಂದರು. ಶೋನ ಪ್ರೋಮೋದಲ್ಲೇ ಎಕ್ಸೈಟ್ಮೆಂಟ್ ಇದೆ. ಪಾಸಿಟಿವ್ ಎನರ್ಜಿ ಕಾಣಿಸಿಕೊಂಡಿದೆ. ಇದೊಂದು ಫ್ಯಾಮಿಲಿ ಶೋ. ಈ ಶೋ ನೋಡಿ ಪ್ರೇಕ್ಷಕರು ಏನ್ ಹೇಳ್ತಾರೆ ಅಂತಾ ನೋಡೋದಕ್ಕೆ ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.

https://twitter.com/ColorsKannada/status/915790820376141824

Comments

Leave a Reply

Your email address will not be published. Required fields are marked *