ಅರ್ಧಕ್ಕೇ ನಿಂತ್ಹೊಯ್ತು ಸೌದಿ ರಾಜನ ‘ಚಿನ್ನದ ಎಸ್ಕಲೇಟರ್’- ವಿಡಿಯೋ ವೈರಲ್

ಮಾಸ್ಕೋ: ಹೊಳೆಯೋದೆಲ್ಲಾ ಚಿನ್ನ ಅಲ್ಲ ಅಂತ ಮಾತಿದೆ. ಆದ್ರೆ ಇಲ್ಲಿ ಹೊಳೆಯುತ್ತಿದ್ದದ್ದು ಚಿನ್ನವೇ. ಆದ್ರೆ ಸರಿಯಾಗಿ ಕೆಲಸ ಮಾಡ್ತಿರ್ಲಿಲ್ಲ ಅಷ್ಟೇ! ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಕಳೆದ ಬುಧವಾರ ಮಾಸ್ಕೋ ಭೇಟಿಗೆಂದು ಬಂದಿದ್ರು. ಈ ವೇಳೆ ಅವರು ತಮ್ಮ ಖಾಸಗಿ ಪ್ಲೇನ್‍ನಿಂದ ಹೊರಬರುತ್ತಿದ್ದಂತೆ ತೊಂದರೆ ಎದುರಾಯ್ತು.

ದುಬಾರಿ ಪ್ರಯಾಣ ಮಾಡೋದ್ರಲ್ಲಿ ಫೇಮಸ್ ಆಗಿರೋ ರಾಜ ಪ್ಲೇನ್‍ನಿಂದ ಹೊರಬಂದು ಮಿರಮಿರ ಮಿಂಚುತ್ತಿದ್ದ ಚಿನ್ನದ ಎಸ್ಕಲೇಟರ್ ಮೇಲೆ ನಿಂತ್ರು. ಆದ್ರೆ ಅದ್ಯಾಕೋ ಎಸ್ಕಲೇಟರ್ ಅರ್ಧಕ್ಕೇ ನಿಂತುಹೋಯ್ತು. ಇದರಿಂದ ಸ್ವಲ್ಪ ಸಮಯ ರಾಜ ಹಾಗೂ ಅವರ ಜೊತೆಯಿದ್ದ ಸಿಬ್ಬಂದಿ ಕನ್‍ಫ್ಯೂಸ್ ಆಗಿ ನಿಂತಲ್ಲೇ ನಿಂತಿದ್ರು.

ನಂತರ ರಾಜ ಕಾಲ್ನಡಿಗೆಯಲ್ಲೇ ಉಳಿದ ಮೆಟ್ಟಿಲುಗಳನ್ನ ಇಳಿದ್ರು. 81 ವರ್ಷದ ಸಲ್ಮಾನ್ ಅವರು ಕೆಳಗಿಳಿಯುತ್ತಿದ್ರೆ ಅವರ ಸಹಾಯಕರು ಗೊಂದಲದಲ್ಲೇ ಹಿಂಬಾಲಿಸಿದ್ರು. ಇದರ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಹಾಸ್ಯಾಸ್ಪದ ಕಮೆಂಟ್‍ಗಳು ಬಂದಿವೆ.

ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ 4 ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ವಿಶೇಷ ಎಸ್ಕಲೇಟರ್ ಮಾತ್ರವಲ್ಲದೆ ತನ್ನ ಜೊತೆಗೆ 1500 ಜನರನ್ನ ಕರೆತಂದಿದ್ದಾರೆ. ಕಾರ್ಪೆಟ್ ಸೇರಿದಂತೆ ಸ್ವಂತ ಪೀಠೋಪಕರಣ ಹಾಗೂ 800 ಕೆಜಿ ಆಹಾರ ಸಾಮಗ್ರಿಗಳನ್ನ ಸೌದಿಯಿಂದ ಜೊತೆಯಲ್ಲಿ ತಂದಿದ್ದಾರೆ.

https://twitter.com/RT_com/status/915974579604066305?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

https://twitter.com/Tin_Tin_in_Tibt/status/915999095587819520?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

https://twitter.com/SeeboldHelen/status/916037244103905280?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

https://twitter.com/sukhan85/status/916049111144480769?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-saudi-king-salman-bin-abdulazizs-gold-escalator-stops-midway-then-this-1759434

Comments

Leave a Reply

Your email address will not be published. Required fields are marked *