ರಾಯಚೂರಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬದ ವಿಶೇಷ ಆಚರಣೆ

ರಾಯಚೂರು : ಹಿಂದೂ ಮುಸ್ಲಿಂರ ಭಾವೈಕ್ಕೆತೆ ಸಂಕೇತವಾದ ಮೊಹರಂ ಹಬ್ಬವನ್ನ ರಾಯಚೂರಿನ ದೇವದುರ್ಗದ ಜಾಲಹಳ್ಳಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು. ಹುಸೇನ ಪಾಷ, ಸೈಯದ್ ಖಾಸಿಂ, ಹೈದರ ಅಲಿ, ಇಮಾಮ್ ಖಾಸಿಂ ಈ ನಾಲ್ಕು ಹೆಸರಿನ ದೇವರು ಕೂರಿಸಿ ಹಬ್ಬ ಮಾಡಲಾಗುತ್ತಿದೆ.

ಮೊಹರಂ ಹಿನ್ನೆಲೆ ಜೋರಾಗಿ ಕತ್ತಲ ರಾತ್ರಿಯಲ್ಲಿ ಆಚರಿಸಲಾಯಿತು. ನೂರು ಕೆ.ಜಿ ಹೂವಿನ ಹಾರಗಳ ಹಾಕಿ ಭಾರದ ದೇವರನ್ನ ಹೊತ್ತು ಬೆಂಕಿಯ ಸುತ್ತ ಭಕ್ತರು ಪ್ರದಕ್ಷಿಣೆ ಹಾಕಿದರು. ಹಬ್ಬದ ಕೊನೆಯ ದಿನವಾದ ಇಂದು ದಫನ್ ನಡೆಯುತ್ತದೆ. ಮಧ್ಯಾಹ್ನ ವೇಳೆಗೆ ಎಲ್ಲಾ ಆಲಂಗಳು ಒಟ್ಟಿಗೆ ಮೆರವಣಿಗೆ ಹೊರಟು ದಫನ್ ಕಾರ್ಯ ನಡೆಯುತ್ತದೆ.

ಇನ್ನೂ ಲಿಂಗಸುಗೂರಿನ ಮುದಗಲ್ ನಲ್ಲೂ ವಿಶಿಷ್ಟವಾಗಿ ಮೊಹರಂ ಹಬ್ಬವನ್ನ ಆಚರಿಸಲಾಗುತ್ತಿದೆ. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿದೆ.

Comments

Leave a Reply

Your email address will not be published. Required fields are marked *