ಕಜ್ಜಾಯ ಮಾಡೋಕೆ ಇಲ್ಲಿದೆ ಸಿಂಪಲ್ ವಿಧಾನ

ಕಜ್ಜಾಯ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದ್ರೆ ಅದನ್ನ ಮಾಡೋಕೆ ಮಾತ್ರ ಕಷ್ಟ, ಮಾಡಿದ್ರೂ ಸರಿಯಾಗಿ ಪಾಕ ಬರಬೇಕು ಅಂತೆಲ್ಲಾ ಯೋಚಿಸ್ತಿದ್ರಾ? ಹಾಗಿದ್ರೆ ಇಲ್ಲಿದೆ ನೋಡಿ ಕಜ್ಜಾಯ ಮಾಡೋಕೆ ಸಿಂಪಲ್ ವಿಧಾನ

ಬೇಕಾಗುವ ಸಾಮಾಗ್ರಿಗಳು:
* ಅಕ್ಕಿ – ಒಂದುವರೆ ಕಪ್
* ಬೆಲ್ಲ- 1 ಕಪ್
* ತುಪ್ಪ ಅಥವಾ ಎಣ್ಣೆ- 4-5 ಚಮಚ
* ಎಳ್ಳು- 2 ಚಮಚ
* ಗಸಗಸೆ- 1 ಚಮಚ
* ಏಲಕ್ಕಿ- 2 ಚಮಚ
* ಎಣ್ಣೆ- ಕರಿಯಲು

ಮಾಡುವ ವಿಧಾನ:
* ಅಕ್ಕಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿಡಿ.
* ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿಕೊಳ್ಳಿ.
* ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಂಡು, ಅದನ್ನು ಜಲಾರಿ ಮಾಡಿ ಗಂಟು, ಕಸವನ್ನು ತೆಗೆಯಿರಿ.
* ಒಲೆ ಮೇಲೆ ಬಾಣಲೆ ಇಟ್ಟು ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ.
* ಬೆಲ್ಲ ನಜ್ಜುಗುಜ್ಜು ಮಾಡಿ ಪಾಕ ಬರುವವರೆಗೂ ಕುದಿಸಿ.
* ಒಲೆಯ ಉರಿ ಕಡಿಮೆ ಮಾಡಿ ಪುಡಿ ಮಾಡಿದ ಅಕ್ಕಿಯನ್ನು ಹಾಕಿ.
* ಎಳ್ಳು, ಗಸಗಸೆ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ.
* ಗಂಟು ಬಾರದ ರೀತಿಯಲ್ಲಿ ಸ್ಪಲ್ವ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ಒಲೆಯಿಂದ ಕೆಳಗಿಳಿಸಿ.
* ನಂತರ ಬೇರೆ ಬಾಣಲಿಗೆ ಎಣ್ಣೆ ಹಾಕಿ ಕಾಯಲು ಇಡಿ.
* ಸಿದ್ದ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್‍ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ.
* ನಂತರ ಅದನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ.

(ಗಮನಿಸಿ: ಬೇಕಾದಲ್ಲಿ ಅಕ್ಕಿ ಹಿಟ್ಟಿನೊಂದಿಗೆ ಚುಕ್ಕಿಬಾಳೇಹಣ್ಣನ್ನು ಕಲಸಿಕೊಳ್ಳಬಹುದು)

Comments

Leave a Reply

Your email address will not be published. Required fields are marked *