ಇನ್ನು ಮುಂದೆ ಆಧಾರ್ ಇಲ್ಲದಿದ್ದರೆ ಪಬ್‍ಗಳಿಗೆ ಎಂಟ್ರಿ ಇಲ್ಲ!

ಹೈದರಾಬಾದ್: ಇನ್ನು ಮುಂದೆ ನೀವು ಹೈದರಾಬಾದ್ ಪಬ್‍ಗಳಿಗೆ ಹೋಗುತ್ತಿರಾ? ಹಾಗಾದ್ರೆ ನಿಮ್ಮ ಜೊತೆ ಆಧಾರ್ ಕಾರ್ಡ್ ಇರಲೇಬೇಕು.

ಪಬ್‍ಗಳಿಗೆ ಬರುವವರು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಅದರಲ್ಲೂ ಆಧಾರ್ ಕಾರ್ಡ್ ತೋರಿಸಿದ ಮೇಲೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ತೆಲಂಗಾಣ ಅಬಕಾರಿ ಇಲಾಖೆ ಹೇಳಿದೆ.

ಇಲಾಖೆ ನಗರದಾದ್ಯಂತ ಇರುವಂತಹ ಪಬ್‍ಗಳ ಮಾಲೀಕರ ಜೊತೆ ಮಾತಾಡಿ, ಇನ್ನು ಮುಂದೆ ಪಬ್‍ಗೆ ಬರುವವರ ಆಧಾರ್ ಕಾರ್ಡ್ ಪರಿಶೀಲನೆ ಮಾಡಿ ಅದರಲ್ಲಿ ಅವರ ವಯಸ್ಸನ್ನು ನೋಡಿ ಖಚಿತ ಮಾಡಿಕೊಂಡು ನಂತರ ಪ್ರವೇಶಕ್ಕೆ ಅನುಮತಿ ನೀಡಬೇಕು. ಒಂದು ವೇಳೆ 21 ವಯಸ್ಸಿಗಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಿ ಎಂದು ತಿಳಿಸಿದೆ.

17 ವರ್ಷದ ಹುಡುಗಿಯ ಕೊಲೆ ತನಿಖೆಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ನಗರದ ಹೋಟೆಲ್‍ಗಳಲ್ಲಿ ಅಪ್ರಾಪ್ತರಿಗೆ ಮದ್ಯಪಾನ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಠಿಣ ಕ್ರಮವನ್ನು ಕೈಗೊಂಡಿದೆ.

ಪಬ್‍ಗಳಿಗೆ ಆಗಮಿಸುವ ಎಲ್ಲ ಗ್ರಾಹಕರ ಮಾಹಿತಿಗಳನ್ನು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಎಲ್ಲಾ ಪಬ್ ಮತ್ತು ಬಾರ್‍ಗಳ ಮ್ಯಾನೇಜರ್‍ಗಳಿಗೆ ಸರ್ಕಾರ ಸೂಚಿಸಿದೆ.

Comments

Leave a Reply

Your email address will not be published. Required fields are marked *