ಯುಜಿಸಿ ಯಿಂದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ ಬೆಂಗಳೂರು ವಿವಿ!

ಬೆಂಗಳೂರು: ಯುಜಿಸಿಯಿಂದ ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‍ಓಯು) ಮಾನ್ಯತೆಯನ್ನು ಕಳೆದುಕೊಂಡಿದೆ. ಇಂದು ಬೆಂಗಳೂರು ವಿಶ್ವವಿದ್ಯಾಲಯ ತನ್ನ ನಿರ್ಲಕ್ಷ್ಮದಿಂದ ಯುಜಿಸಿಯಿಂದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿದೆ.

ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗ ನವೀಕರಣ ಮಾಡಿಕೊಳ್ಳಲು ಎರಡು ವರ್ಷಗಳ ಅವಧಿಯನ್ನು ತೆಗೆದುಕೊಂಡಿತ್ತು. ಆದರೆ ಅವಧಿ ಮುಕ್ತಾಯವಾಗುತ್ತಿದ್ದರು, ಕುಲಪತಿ ಮತ್ತು ಕುಲಸಚಿವರು ಇನ್ನೂ ಯಾವುದೇ ದಾಖಲಾತಿಯನ್ನು ನೀಡಿಲ್ಲ. ಈವರೆಗೂ ನವೀಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಯುಜಿಸಿ ಜೊತೆ ಮಾತುಕತೆ ಕೂಡ ನಡೆಸಿಲ್ಲ. ಹೀಗಾಗಿ ನಿಯಮ ಪಾಲನೆ ಮಾಡದ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಕೋರ್ಸ್ ಅನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕಂಡುಬರುತ್ತಿವೆ. ಇದು ಅಧಿಕಾರಿಗಳ ನಿರ್ಲಕ್ಷ್ಮದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯ ನಿಯಮ ಪಾಲನೆ ಮಾಡದೇ ಇದ್ದ ಕಾರಣಕ್ಕೆ 2012-15 ವರೆಗೆ ಯುಜಿಸಿಯ ಮಾನ್ಯತೆ ರದ್ದು ಮಾಡಲಾಗಿತ್ತು. ನಂತರ ಕುಲಪತಿಯಾಗಿದ್ದ ಪ್ರೊ.ತಿಮ್ಮೆಗೌಡರು ಯುಜಿಸಿಗೆ ಸೂಕ್ತ ದಾಖಲೆ ನೀಡಿ 2016-17, 2017-18 ನೇ ಸಾಲಿನ ಎರಡು ವರ್ಷಗಳ ಅವಧಿಗೆ ನವೀಕರಣ ಮಾಡಿಸಿಕೊಂಡರು. ಆದರೆ ಈಗ ಇದರ ಅವಧಿ ಸೆಪ್ಟೆಂಬರ್ 23 ಕ್ಕೆ ಮುಗಿಯುತ್ತಿದ್ದು, ಈವರೆಗೂ ಯುಜಿಸಿಗೆ ಅಗತ್ಯ ದಾಖಲೆಯನ್ನು ಒದಗಿಸಿ ನವೀಕರಣ ಮಾಡಿಕೊಂಡಿಲ್ಲ.

ಈ ಬಗ್ಗೆ ದೂರ ಶಿಕ್ಷಣ ವಿಭಾಗದ ನಿರ್ದೇಶಕರು ದಾಖಲಾತಿ ಒದಗಿಸೋದನ್ನು ತಡಮಾಡಿದೆ. ಅಂತಿಮವಾಗಿ ಯುಜಿಸಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಒಂದು ತಿಂಗಳು ಅವಧಿಯನ್ನು ವಿಸ್ತರಿಸಿದ್ದು, ಅಷ್ಟರಲ್ಲಿ ದಾಖಲಾತಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ದೂರ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಜೀವನ ಅತಂತ್ರವಾಗಲಿದೆ ಎಂದು ದೂರ ಶಿಕ್ಷಣ ವಿಭಾಗದ ನಿರ್ದೇಶಕ ಷಡಾಕ್ಷರಿ ತಿಳಿಸಿದ್ದಾರೆ.

ಸದ್ಯಕ್ಕೆ ದೂರ ಶಿಕ್ಷಣ ವಿಭಾಗದ ನಿರ್ದೇಶಕರ ಅವಧಿ ಮುಕ್ತಾಯವಾಗಿದೆ. ಆದ್ದರಿಂದ ಹೊಸ ನಿರ್ದೇಶಕರ ಹುಡುಕಾಟದಲ್ಲಿ ವಿಶ್ವವಿದ್ಯಾಲಯವಿದೆ.

 

Comments

Leave a Reply

Your email address will not be published. Required fields are marked *