ಮರ್ಮಾಂಗಕ್ಕೆ ಜಿಮ್ ಪ್ಲೇಟ್ ಅಂಟಿಸಿಕೊಂಡ! ತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಬರ್ಬೇಕಾಯ್ತು

ಬರ್ಲಿನ್: ಜಿಮ್‍ಗೆ ಹೋಗೋದು ದೇಹವನ್ನು ದೃಢವಾಗಿಸಿಕೊಂಡು, ಬಲಿಷ್ಠವಾಗಿ ಕಾಣಿಸಿಕೊಳ್ಳಲು. ಆದರೆ ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಹುಚ್ಚು ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ.

ಸೆಪ್ಟಂಬರ್ 15 ರಂದು ಜರ್ಮನಿ ಪಟ್ಟಣದ ವೊಮ್ರ್ಸ್ ನಿವಾಸಿ ಇಂತಹ ಮೂರ್ಖ ಸಾಹಸವನ್ನು ತಮ್ಮ ಸ್ಥಳೀಯ ಜಿಮ್‍ನಲ್ಲಿ ಮಾಡಿದ್ದಾನೆ. ಈತ ಸುಮಾರು 2.5 ಕೆ.ಜಿ ತೂಕದ ಪ್ಲೇಟ್ ನಲ್ಲಿ ಮರ್ಮಾಂಗಕ್ಕೆ ತೂರಿಸಿದ್ದಾನೆ. ಬಳಿಕ ಪ್ಲೇಟ್ ನಿಂದ ಮರ್ಮಾಂಗವನ್ನು ಬಿಡಿಸಿಕೊಳ್ಳಲು ಆಗದೇ ಒದ್ದಾಡಿದ್ದಾನೆ.

ವಿಚಾರ ತಿಳಿದು ವೈದ್ಯರು ಬಂದು ತೆಗೆಯಲು ಪ್ರಯತ್ನಿಸಿದ್ದಾರೆ. ಅವರಿಂದಲೂ ಪ್ಲೇಟ್ ತೆಗೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ದಳ ಬಂದು ಪ್ಲೇಟ್ ತೆಗೆದಿದ್ದಾರೆ. ಹೈಡ್ರಾಲಿಕ್ ಸಾಧನ ಬಳಸಿ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ಲೇಟನ್ನು ಕತ್ತರಿಸಿ ಆತನನ್ನು ರಕ್ಷಿಸಿದ್ದಾರೆ.

ಈ ಕಾರ್ಯಾಚರಣೆ ನಡೆದ ಬಳಿಕ `ದಯವಿಟ್ಟು ಯಾರು ಇಂತಹ ಕಠಿಣ ಸಾಹಸವನ್ನು ಮಾಡಬೇಡಿ’ ಎಂದು ಜರ್ಮನಿಯ ಅಗ್ನಿಶಾಮಕ ಘಟಕ ಫೇಸ್‍ಬುಕ್ ನಲ್ಲಿ ತುಂಡು ತುಂಡಾಗಿ ಬಿದ್ದಿದ್ದ ಪ್ಲೇಟಿನ ಫೋಟೋ ವನ್ನು ಪ್ರಕಟಿಸಿದೆ.

Comments

Leave a Reply

Your email address will not be published. Required fields are marked *