ಜಹೀರ್ ಖಾನ್-ಸಾಗರಿಕಾ ಮದ್ವೆ ಡೇಟ್ ಫಿಕ್ಸ್

ನವದೆಹಲಿ: ಕ್ರಿಕೆಟಿಗ ಜಹೀರ್ ಖಾನ್ ಮತ್ತು ಬಾಲಿವುಡ್‍ನ ಚೆಕ್ ದೇ ಬೆಡಗಿ ಸಾಗರಿಕಾ ಘಾಟ್ಜ್ ನವೆಂಬರ್ 27ರಂದು ಹಸೆಮಣೆ ಏರಿಲಿದ್ದಾರೆ. ಈ ಜೋಡಿ ಕಳೆದ ಮೇ ತಿಂಗಳಲ್ಲಿ ಎಂಗೆಜ್‍ಮೆಂಟ್ ಮಾಡಿಕೊಂಡಿದ್ದರು.

ಸಾಗರಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಇದೇ ವರ್ಷ ನವೆಂಬರ್ 27 ರಂದು ಮದುವೆ ಡೇಟ್ ಫಿಕ್ಸ್ ಆಗಿದೆ. ಮದುವೆಯಾಗಿ ಸಿನಿಮಾ ವೃತ್ತಿ ಜೀವನದಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜಹೀರ್ ಖಾನ್ ನನಗೆ ಉಂಗುರವನ್ನು ಕೊಟ್ಟು ಪ್ರೀತಿಯ ವಿಚಾರವನ್ನು ಪ್ರಸ್ತಾಪಿಸಿದರು. ಒಂದು ಕ್ಷಣ ಆಶ್ಚರ್ಯಗೊಳ್ಳುವುದರ ಜೊತೆಗೆ ಖುಷಿಯಿಂದ ಕುಣಿದಾಡಿದೆ ಎಂದು ಗೆಳೆಯನ ಪ್ರೀತಿ ನಿವೇದನೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ನನ್ನ ಮುಂದಿನ ಜೀವನದ ಮಧುರ ಕ್ಷಣಗಳನ್ನು ಜಹೀರ್ ಜೊತೆ ಕಳೆಯಲು ನಿರ್ಧರಿಸಿದ್ದೇನೆ. ಜಹೀರ್ ನನಗೆ ಉತ್ತಮ ಸಂಗತಿಯಾಗುವುದು ನಿಶ್ಚಿತ. ಅವರ ಜೊತೆ ವೈವಾಹಿಕ ಜೀವನವನ್ನು ನಡೆಸಲು ಉತ್ಸುಕಳಾಗಿದ್ದೇನೆ ಎಂದು ಭಾವಿ ಪತಿಯ ಬಗ್ಗೆ ತಮ್ಮ ಅಭಿಪ್ರಾಯಯವನ್ನು ಹೇಳಿದರು.

ಕಳೆದ ವರ್ಷ ಯುವರಾಜ್ ಸಿಂಗ್ ಮತ್ತು ಹೇಜಲ್ ಕೀಚ್ ಅವರ ಮದುವೆ ದಿನದಂದು ಇಬ್ಬರ ನಡುವಿನ ಪ್ರೀತಿಯ ಸಂಬಂಧದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಆದರೆ ಇಬ್ಬರ ವೃತ್ತಿ ಬದುಕಿನಲ್ಲಿ ಹಲವು ಜವಾಬ್ದಾರಿಗಳು ಹೊಂದಿದ್ದೆವು. ಆದ್ದರಿಂದ ಮದುವೆ ತಡವಾಯಿತು. ಈಗ ಎಲ್ಲವೂ ಮುಕ್ತವಾಗಿದೆ, ಎರಡು ಕುಟುಂಬಗಳ ನಡುವೆಯು ಉತ್ತಮ ಬಾಂಧವ್ಯ ರೂಪುಗೊಂಡು ಮದುವೆ ಡೇಟ್ ಫಿಕ್ಸ್ ಆಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *