ಬೋರ್ಡ್ ನಲ್ಲಿದ್ದ ಪದಗಳನ್ನು ಓದದ್ದಕ್ಕೆ ಶಿಕ್ಷಕ ಬಾಲಕನಿಗೆ ಥಳಿಸಿದ್ದು ಹೀಗೆ!

ಹೈದರಾಬಾದ್: 2ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ಅಮಾನವೀಯವಾಗಿ ಹೊಡೆದಿರುವ ಘಟನೆ ಹೈದರಾಬಾದ್ ಸಮೀಪದ ಖಾಸಗಿ ಶಾಲೆಯಲ್ಲಿ ನಡೆದಿದೆ.

ಪ್ರಾಂಶುಪಾಲರಾದ ಸುರೇಶ್ ಸಿಂಗ್ ಬೋರ್ಡ್ ಮೇಲೆ ಕೆಲವು ಪದಗಳನ್ನು ಬರೆದು ಬಾಲಕನಿಗೆ ಓದಲು ಹೇಳಿದ್ದರು. ಆದರೆ ಆತ ಓದದೇ ಇದ್ದಿದ್ದಕ್ಕೆ ಸುರೇಶ್ ಸಿಂಗ್ ಬೆನ್ನಿಗೆ ಹೊಡೆದಿದ್ದು ಬಾಸುಂಡೆ ಬಂದಿದೆ.

ಘಟನೆ ನಡೆದ ನಂತರ ನಗರದ ಸರ್ಕಾರೇತರ ಸಂಸ್ಥೆ ‘ಬಾಲಾಲ ಹಕ್ಕುಲ ಸಂಗಮ್’ ಪ್ರಾಂಶುಪಾಲರನ್ನು ಬಂಧಿಸಬೇಕು ಹಾಗೂ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ಹುಡುಗನ ತಾಯಿ ಪ್ರಾಂಶುಪಾಲರು ಮೇಲೆ ದೂರನ್ನು ನೀಡಿದ್ದು, ತಪ್ಪಚಾಬುಟ್ರ ಪೊಲೀಸರು ಪ್ರಾಂಶುಪಾಲರ ವಿರುದ್ಧ ಐಪಿಸಿ ಸೆಕ್ಷನ್ 341 ಮತ್ತು 323 ಅಡಿಯಲ್ಲಿ ಕೇಸನ್ನು ದಾಖಲಿಸಿದ್ದಾರೆ. ಆದರೆ ಪೊಲೀಸರು ಪ್ರಾಂಶುಪಾಲರನ್ನು ಬಂಧಿಸಿಲ್ಲ.

Comments

Leave a Reply

Your email address will not be published. Required fields are marked *