ಹಾಸನ: ಹುಚ್ಚು ಹಿಡಿದಿರುವ ನಾಯಿಯೊಂದು 15ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಬೇಲೂರು ಪಟ್ಟಣದ ಬಡಾವಣೆಗಳಲ್ಲಿ ಹುಚ್ಚುನಾಯಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದೆ. ಪರಿಣಾಮ ವೃದ್ಧರು, ಮಕ್ಕಳು ಸೇರಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳು ಸದ್ಯ ಬೇಲೂರು ಮತ್ತು ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಆದ್ರೆ ನಾಯಿಯನ್ನು ಈವರಗೆ ಹಿಡಿಯಲು ಸಾಧ್ಯವಾಗಿಲ್ಲ. ಸ್ಥಳೀಯರು ಮತ್ತು ಪುರಸಭೆ ಸಿಬ್ಬಂದಿ ಸೇರಿ ಬೈಕ್ ಗಳ ಮೂಲಕ ನಾಯಿ ಹಿಡಿಯಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಟ್ಟಣ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.








Leave a Reply