ಬೀಜಿಂಗ್: ಮಾಜಿ ಪತಿಯೊಂದಿಗೆ ವಾಗ್ವಾದ ನಡೆದು ಮಹಿಳೆ ತನ್ನ ಬಟ್ಟೆಗಳನ್ನ ಕಳಚಿ ಬೆತ್ತಲಾದ ವಿಚಿತ್ರ ಘಟನೆ ಚೀನಾದ ಜಿಯಾಂಗ್ಸು ನಲ್ಲಿ ನಡೆದಿದೆ.
ಜಿಯಾಂಗ್ಸುನಲ್ಲಿ ವುಕ್ಸಿಯ ಮಾಲ್‍ನಲ್ಲಿ ಮಹಿಳೆ ಹಾಗೂ ಆಕೆಯ ಮಾಜಿ ಪತಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಇಬ್ಬರ ಮಧ್ಯೆ ಶಾಪಿಂಗ್ ಮಾಲ್ ನಲ್ಲೆ ವಾಗ್ವಾದ ನಡೆದಿದೆ. ಇದೇ ವೇಳೆ ಮಾಜಿ ಪತಿ, ನೀನು ಬಳಸುತ್ತಿರುವ ಮೊಬೈಲ್ ಫೋನ್ ನಾನು ಕೊಡಿಸಿದ್ದು ಎಂದು ಹೇಳಿದ್ದಾನೆ. ಆಗ ಕುಪಿತಗೊಂಡ ಮಹಿಳೆ ಮೊಬೈಲ್ ಫೋನನ್ನು ನೆಲದ ಮೇಲೆ ಎಸೆದಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಮಾಜಿ ಪತಿರಾಯ ನೀನು ಹಾಕಿರುವ ಬಟ್ಟೆ ನನ್ನ ಹಣದಿಂದ ಖರೀದಿಸಿರುವುದು ಎಂದು ಛೇಡಿಸಿದ್ದಾನೆ. ಆಗ ಕೋಪಗೊಂಡ ಮಹಿಳೆ ಎಲ್ಲರ ಎದುರೇ ಮಾಲ್‍ನಲ್ಲೆ ಬಟ್ಟೆಯನ್ನೆಲ್ಲ ಬಿಚ್ಚಿ ನಿರ್ವಸ್ತ್ರಳಾಗಿದ್ದಾಳೆ. ಮಾಜಿ ಪತ್ನಿಯ ವರ್ತನೆ ಕಂಡು ದಂಗಾದ ಆತ ಆಕೆಯನ್ನು ತಡೆಯಲು ಯತ್ನಿಸಿದನಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

ತದನಂತರ ಮಹಿಳೆ ಪೂರ್ಣ ನಗ್ನಳಾಗಿ ನಿಂತುರುವುದನ್ನ ಕಾಣಬಹುದು. ಕೊನೆಗೆ ಅಲ್ಲಿದ್ದ ಕೆಲವರು ಆ ಮಹಿಳೆಯ ಸಹಾಯಕ್ಕೆ ಮುಂದಾಗಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
https://www.youtube.com/watch?v=QZ1uG7sTDT0

Isang Babae Ang Naghubad Sa Mall Matapos Malaman Na Ang Kanyang Ex-boyfriend Ang Gumastos Ng Kanyang Suot! https://t.co/VhXII30Byu
— Joy Solivar (@JoySolivar) August 24, 2017

Leave a Reply