ಬೆಂಗಳೂರು: ಕಳೆದ 10 ವರ್ಷಗಳಿಂದ ರಸ್ತೆ ಬದಿಯ ಶೆಡ್‍ನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದರ ಸ್ವಂತ ಸೂರಿನ ಕನಸು ಟ್ವಿಟ್ವರ್‍ನಿಂದಾಗಿ ನನಸಾಗಿದೆ.
ವೃದ್ಧ ಅಬ್ದುಲ್ ಖಾದರ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮೈಸೂರಿನ ಮಹದೇವಪುರ ರಸ್ತೆಯಲ್ಲಿ ಶೆಡ್‍ವೊಂದರಲ್ಲಿ ವಾಸಿಸುತ್ತಿದ್ರು. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮುಹಮ್ಮದ್ ಕಲೀಮುಲ್ಲಾ ಎಂಬವರು ಇವರ ದುಸ್ಥಿತಿಯನು ಕಂಡು ಟ್ವಟ್ಟರ್‍ನಲ್ಲಿ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಿಎಂ, ಸಮಸ್ಯೆಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಬಳಿಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಣ್‍ದೀಪ್, ಅಬ್ದುಲ್ ಖಾದರ್ ಕುಟುಂಬಕ್ಕೆ ಆಶ್ರಯ ಯೋಜನೆಯಡಿ ಮನೆ ನೀಡಲು ಮೈಸೂರು ಮಹಾನಗರಪಾಲಿಕೆಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ವೈಯಕ್ತಿಕ ಟ್ಟಿಟ್ಟರ್ ಖಾತೆ ಆರಂಭಿಸಿದ್ದು ಯಾಕೆ?
Please look into it and help. DC_Mysuru https://t.co/312wnjLw0h
— Siddaramaiah (@siddaramaiah) August 20, 2017
https://twitter.com/gkkaleemulla/status/899309685332824064

Leave a Reply