ಟ್ರೋಲ್‍ಗೊಳಗಾದ ಸೈಫ್ ಅಲಿಖಾನ್ ಮೊದಲ ಪತ್ನಿಯೊಂದಿಗಿನ ಫೋಟೋ

ಮುಂಬೈ: ಬಾಲಿವುಡ್‍ನ ಸೈಫ್ ಅಲಿಖಾನ್ ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೆ ಒಳಪಟ್ಟಿದ್ದು, ಫೋಟೋಗೆ ಫನ್ನಿ ಫನ್ನಿ ಕಮೆಂಟ್‍ಗಳು ಬಂದಿವೆ.

ಸೈಫ್ ಮತ್ತು ಅಮೃತಾ ಸಿಂಗ್ ಇಬ್ಬರ ಮದುವೆಯ ಹಳೆಯ ಫೋಟೋ ಸದ್ಯ ವೈರಲ್ ಆಗಿದೆ. ಈ ಫೋಟೋದಲ್ಲಿ ಅಮೃತಾ ಧರಿಸಿರುವ ಮೂಗುತಿಗೆ ಹಲವರು `ನನ್ನ ಫ್ರೆಂಡ್ಸ್ ಸರ್ಕಲ್ ಕ್ಕಿಂತ ನಿಮ್ಮ ಮೂಗುತಿ ದೊಡ್ಡದಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ.

ಅಮೃತಾ ಮತ್ತು ಸೈಫ್ ಇಬ್ಬರ ವಿವಾಹದ ಫೋಟೋದಲ್ಲಿ ಸೈಫ್ ಅಲಿಖಾನ್ ನವಯುವಕರಾಗಿದ್ದು ಎಲ್ಲರ ಗಮನ ಸೆಳೆದಿದ್ದರೆ, ಅಮೃತಾರ ಮೂಗುತಿ ಮಾತ್ರ ಟ್ರೋಲ್‍ಗೆ ಒಳಗಾಗಿದೆ. ಇಷ್ಟು ದಿನಗಳ ಬಳಿಕ ಅಮೃತಾರ ಮೂಗುತಿ ಮೇಲೆ ಕಣ್ಣು ಹಾಕಿರುವ ಜನರು ಬಗೆ ಬಗೆಯ ಕಮೆಂಟ್‍ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನಿಮ್ಮ ಮುಖಕ್ಕಿಂತ ಮೂಗುತಿಯೇ ದೊಡ್ಡದಾಗಿದೆ. ಪಹೇರದಾರ ಪಿಯಾ ಕೀ ಧಾರಾವಾಹಿಯಲ್ಲಿ ಜೋಡಿಯ ಹಾಗೆ ನೀವು ಕಾಣುತ್ತಿದ್ದೀರಿ. ಇನ್ನೂ ಕೆಲವರು ಮೂಗುತಿ ಗಾತ್ರವನ್ನು ಎಐಡಿಎಂಕೆ ಪಕ್ಷಕ್ಕೆ ಹೋಲಿಸಿದ್ದಾರೆ.

1991ರಲ್ಲಿ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಮದುವೆಯಾಗಿದ್ದು, 2004ರಲ್ಲಿ ಇಬ್ಬರೂ ಸ್ವ ಇಚ್ಛೆಯ ಮೇರೆಗೆ ಕೋರ್ಟ್ ಮುಖಾಂತರ ಡೈವೋರ್ಸ್ ಪಡೆದುಕೊಂಡು 14 ವರ್ಷ ದಾಂಪತ್ಯಕ್ಕೆ ವಿದಾಯ ಹೇಳಿದ್ದಾರೆ. ಸೈಫ್ ಮತ್ತು ಅಮೃತಾ ದಂಪತಿ ಸಾರಾ ಅಲಿಖಾನ್ ಮತ್ತು ಇಬ್ರಾಹಿಂ ಅಲಿಖಾನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಸದ್ಯ ಸೈಫ್ ಅಲಿಖಾನ್ ಬಾಲಿವುಡ್ ಬೇಬೋ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದು, ಒಂದು ವರ್ಷದ ತೈಮೂರ್ ಅಲಿಖಾನ್ ಎಂಬ ಮುದ್ದಾದ ಗಂಡು ಮಗುವನ್ನು ಹೊಂದಿದ್ದಾರೆ.

 

https://twitter.com/HathwalaThakur/status/899588439770779648

https://www.instagram.com/p/BYFR4-UFHE7/?tagged=amritasingh

https://www.instagram.com/p/BXQZev7FnH4/?taken-by=saif_alikan

https://www.instagram.com/p/BXQZnv7FhFG/?taken-by=saif_alikan

Comments

Leave a Reply

Your email address will not be published. Required fields are marked *