ಮುಂಬೈ: ತನ್ನ ಅಪ್ರಾಪ್ತ ಮಗಳನ್ನೇ ಮೈ ಮಾರುವ ದಂಧೆಗೆ ನೂಕಿದ್ದ 30 ವರ್ಷದ ಮಹಿಳೆಯನ್ನ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಗ್ರಾಮಿಣ ಪೊಲೀಸ್ ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್, ಮೀರಾ ರೋಡ್‍ನಲ್ಲಿರುವ ಕಶಿಮೀರಾದ ಮನೆಯೊಂದರ ಮೇಲೆ ಗುರುವಾರದಂದು ದಾಳಿ ಮಾಡಿ 14ರ ಬಾಲಕಿಯನ್ನು ರಕ್ಷಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಗ್ರಾಹಕನ ವೇಷದಲ್ಲಿ ಒಬ್ಬನನ್ನು ಕಳುಹಿಸಿ ಮೊದಲು ಬಾಲಕಿಯ ತಾಯಿಯನ್ನು ಸಂರ್ಕಿಸುವಂತೆ ಮಾಡಿದ್ದರು. ನಂತರ ಸ್ಥಳದಲ್ಲಿ ಮೊದಲೇ ಪೊಲೀಸರು ಕಾದು ಕುಳಿತು ತಾಯಿಯನ್ನು ಬಂಧಿಸಿ ಬಾಲಕಿಯನ್ನ ರಕ್ಷಿಸಿದ್ರು ಎಂದು ಅವರು ಹೇಳಿದ್ದಾರೆ.
ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 366ಎ ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕಿಗೆ ಥಾಣೆಯ ಭಿವಾಂಡಿಯ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
20ರ ಯುವತಿ ಮೇಲೆ ಅತ್ಯಾಚಾರವೆಸಗಿ 4ನೇ ಮಹಡಿಯಿಂದ ತಳ್ಳಿದ ಸ್ನೇಹಿತ https://t.co/79TTSRWABY #Rape #Building pic.twitter.com/qtIspjCFLK
— PublicTV (@publictvnews) August 14, 2017

Leave a Reply