ದಾವಣಗೆರೆ: ನೀರಿನ ವಾಲ್ವ್ ಓಪನ್ ಆಗಿ ಲಕ್ಷಾಂತರ ಲೀಟರ್ ನೀರು ಪೋಲು

ದಾವಣಗೆರೆ: ನೀರಿನ ವಾಲ್ವ್ ಓಪನ್ ಆಗಿ ಲಕ್ಷಾಂತರ ಲೀಟರ್ ನೀರು ನಗರದಲ್ಲಿ ಪೋಲಾಗುತ್ತಿದೆ.

ತುಂಗಾಭದ್ರ ಹೊಳೆಯಿಂದ 22 ಕೆರೆಗೆ ನೀರು ಹರಿಸುವ ಬೃಹತ್ ಪೈಪ್ ಲೈನ್ ವಾಲ್ವ್ ಒಡೆದು ಹೋದರೂ ಇಲ್ಲಿನ ಅಧಿಕಾರಿಗಳು ಮಾತ್ರ ತಲೆ ಕೆಡೆಸಿಕೊಳ್ಳುತ್ತಿಲ್ಲ. ದಾವಣಗೆರೆ ಜಿಲ್ಲೆಯಾದ್ಯಂತ ಮಳೆಯಿಲ್ಲದೆ ಜನರು ಕುಡಿಯುವ ನೀರು ಸಿಗದೇ ಒದ್ದಾಡುವ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಆದರೆ ಇತ್ತ ರಸ್ತೆಗೆ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತದೆ.

ವಾಲ್ವ್ ಓಪನ್ ಆಗಿ ಎರಡು ದಿನ ಆದರೂ ನೀರಾವರಿ ಇಲಾಖೆ ಅಭಿಯಂತರರು ದುರಸ್ಥಿ ಕಾರ್ಯ ಮಾಡದೆ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿದ್ದಾರೆ. ಜಿಲ್ಲೆಯ ನಗರಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದ್ದು ವ್ಯರ್ಥವಾಗುತ್ತಿರುವ ಇರೋ ನೀರನ್ನ ಬಳಸಿಕೊಂಡರೆ ನಿತ್ಯ ಒಂದು ವಾರ್ಡ್‍ಗೆ ನೀರು ಕೊಡಬಹುದು. ಅಧಿಕಾರಿಗಳ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

 

Comments

Leave a Reply

Your email address will not be published. Required fields are marked *