ಸಿಆರ್‍ಪಿಎಫ್ ಯೋಧ ನಮಾಜ್ ಮಾಡುವ ಫೋಟೋ ವೈರಲ್

ಶ್ರೀನಗರ: ಸದಾ ಭಯೋತ್ಪಾದಕತೆ ನೆರಳಲ್ಲಿ ಬದುಕುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರೊಬ್ಬರು ನಮಾಜ್ ಮಾಡುವ ಫೋಟೋ ವೈರಲ್ ಆಗಿದೆ.

ಶ್ರೀನಗರದ ಸಿಆರ್‍ಪಿಎಫ್ ತನ್ನ ಟ್ವಿಟರ್ ಅಕೌಂಟ್‍ನಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿದೆ. ಈ ಫೋಟೋಗಳಲ್ಲಿ ಯೋಧರೊಬ್ಬರು ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದು ಬದಿಗಿಟ್ಟು ನಮಾಜ್ ಮಾಡುತ್ತಿದ್ದಾರೆ, ಪಕ್ಕದಲ್ಲಿ ಮತೊಬ್ಬ ಸೈನಿಕರು ಶಸ್ತ್ರಸಜ್ಜಿತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ನಮಾಜ್ ಮಾಡುವ ಸೈನಿಕ ಸಹ ಕರ್ತವ್ಯದಲ್ಲಿಯೇ ಇದ್ದು, ನಮಾಜ್ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇದು ನಮ್ಮ ದೇಶದ ಸಹೋದರತ್ವ ಭಾವನೆ ಎಂದು ಸಿಆರ್‍ಪಿಎಫ್ ತನ್ನ ಟ್ವಿಟರ್‍ನಲ್ಲಿ ಬರೆದುಕೊಂಡಿದೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಇದು ನಮ್ಮ ದೇಶ ಎಂದು ಹಲವರು ಕಮೆಂಟ್ ಮಾಡಿ ರಿಟ್ವೀಟ್ ಮಾಡ್ತಿದ್ದಾರೆ.

https://twitter.com/06Rupak/status/891514969489121280

Comments

Leave a Reply

Your email address will not be published. Required fields are marked *