28 ರನ್ ಗಳಿಗೆ 7ವಿಕೆಟ್ ಪತನ: ಭಾರತಕ್ಕೆ ವಿರೋಚಿತ ಸೋಲು

ಲಾರ್ಡ್ಸ್: ಫೈನಲ್ ನಲ್ಲಿ ಟೀಂ ಇಂಡಿಯಾ ವಿರುದ್ಧ 9 ರನ್ ಗಳ ಜಯವನ್ನು ಸಾಧಿಸುವ ಮೂಲಕ ಮೂಲಕ ಇಂಗ್ಲೆಂಡ್ ವಿಶ್ವಕಪ್ ಎತ್ತಿ ಸಂಭ್ರಮಿಸಿದೆ.

229 ರನ್‍ಗಳ ಸವಾಲು ಸುಲಭವಾಗಿದ್ದರೂ, ಕೊನೆಯಲ್ಲಿ 28 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತಕ್ಕೆ ಫೈನಲ್ ನಲ್ಲಿ ವಿರೋಚಿತ ಸೋಲಾಗಿದೆ.

ಭಾರತ ಮೂರು ವಿಕೆಟಿಗೆ 191 ರನ್ ಗಳಿಸಿದ್ದಾಗ ಜಯಗಳಿಸುವ ವಿಶ್ವಾಸದಲ್ಲಿತ್ತು. ಆದರೆ ಆರಂಭಿಕ ಬ್ಯಾಟ್ಸ್ ವುಮೆನ್ ಪೂನಂ ರಾವತ್ 42.5 ಓವರ್ ನಲ್ಲಿ ಎಲ್‍ಬಿ ಬಿದ್ದು ಔಟಾದರೋ ಅಲ್ಲಿಂದ ಭಾರತ ಕುಸಿತ ಆರಂಭವಾಯಿತು. ನಂತರ ಬಂದ ಸುಷ್ಮಾ ವರ್ಮಾ ಶೂನ್ಯಕ್ಕೆ ಔಟಾದರೆ ಔಟಾದರೆ, ವೇದ ಕೃಷ್ಣ ಮೂರ್ತಿ ಔಟಾದರು. ನಂತರ ಬಂದ ಜೂಲನ್ ಗೋಸ್ವಾಮಿ ಶೂನ್ಯಕ್ಕೆ ಔಟದರು.

14ರನ್ ಗಳಿಸಿದ್ದಾಗ ದೀಪ್ತಿ ಶರ್ಮಾ ಕ್ಯಾಚ್ ನೀಡಿ ಔಟಾದರೆ, ಶಿಖಾ ಪಾಂಡೆ ಅನಗತ್ಯ ರನ್ ಕದಿಯಲು ಹೋಗಿ ರನ್ ಔಟ್ ಆದರು. ಕೊನೆಯಲ್ಲಿ ರಾಜೇಶ್ವರಿ ಗಾಯಕ್ವಾಡ್ ಬೌಲ್ಡ್ ಆಗುವ ಮೂಲಕ ಭಾರತ ಸೋಲನ್ನು ಒಪ್ಪಿಕೊಂಡಿತು. ರನ್ ಕಡಿಮೆ ಇದ್ದು ಬಾಲ್ ಜಾಸ್ತಿ ಇದ್ದರೂ ಕೊನೆಯಲ್ಲಿ ಪಟಪಟನೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದ ಭಾರತ ಅಂತಿಮವಾಗಿ 219 ರನ್ ಗಳಿಗೆ ಆಲೌಟ್ ಆಯ್ತು.

ಅನ್ಯ ಶಬ್ರಸಸೋಲೆ 9.4 ಓವರ್ ಎಸೆದು 46 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಭಾರತದ ಪರ ಪೂನಂ ರಾವತ್ 86 ರನ್(115 ಎಸೆತ, 4 ಬೌಂಡರಿ, 1 ಸಿಕ್ಸರ್), ಹರಂಪ್ರೀತ್ ಕೌರ್ 51 ರನ್(80 ಎಸೆತ, 3 ಬೌಂಡರಿ, 2 ಸಿಕ್ಸರ್), ವೇದಾ ಕೃಷ್ಣಮೂರ್ತಿ 35 ರನ್(34 ಎಸೆತ, 5 ಬೌಂಡರಿ) ಹೊಡೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತ್ತು.  ಆರಂಭದಲ್ಲಿ ರಾಜೇಶ್ವರಿ ಗಾಯಕ್ವಾಡ್ ಮೊದಲ ವಿಕೆಟ್ ಕಿತ್ತರೆ, ನಂತರ ಪೂನಮ್ ಯಾದವ್ ಎರಡು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡಿಗೆ ಹೊಡೆತ ನೀಡಿದ್ದರು.

63 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸಾರಾ ಟೇಲರ್ ಮತ್ತು ನಟಲೈ ಸೀವರ್ 4 ವಿಕೆಟಿಗೆ 83 ರನ್ ಗಳ ಜೊತೆಯಾಟವಾಡಿದರು. ಸಾರಾಟ ಟೇಲರ್ ಜೂಲನ್ ಗೋಸ್ವಾಮಿ ಬೌಲಿಂಗ್ ನಲ್ಲಿ ಕೀಪರ್‍ಗೆ ಕ್ಯಾಚ್ ನೀಡಿ ಔಟಾದರೆ ನಂತರದ ಎಸೆತದಲ್ಲಿ ಫ್ರಾನ್ ವಿಲ್ಸನ್ ಎಲ್‍ಬಿಗೆ ಔಟಾದರು.

ನಟಲೈ ಸೀವರ್ 51 ರನ್ ಗಳಿಸಿದರೆ, ಕ್ಯಾಥರೀನ್ ಬ್ರಂಟ್ 34 ರನ್ ಗಳಿಸಿದರು. ಜೂಲನ್ ಗೋಸ್ವಾಮಿ 10 ಓವರ್ ನಲ್ಲಿ ಮೂರು ಮೇಡನ್ ಮಾಡಿ 23 ರನ್ ನೀಡಿ 3 ವಿಕೆಟ್ ಕಿತ್ತರು. ಪೂನಂ ಯಾದವ್2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.

 

 

 

Comments

Leave a Reply

Your email address will not be published. Required fields are marked *