ಅಕ್ರಮವಾಗಿ 19 ಜಾನುವಾರು ಸಾಗಾಟ: ನಾಲ್ವರು ಅರೆಸ್ಟ್, ಲಾರಿ ಜಪ್ತಿ

ಕಾರವಾರ: ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 19 ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಟ್ಟಣದ ಜೋಡುಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಪಾಸಣೆಗೊಳಪಡಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವುದು ಕಂಡು ಬಂದಿದೆ.

ಕೇರಳದ ಕಾಸರಗೋಡು ಮೂಲದವರಾದ ಚಾಲಕ ಬಿ.ಎಮ್. ಅಬುಬಕ್ಕರ್ ಮಹಮ್ಮದ್ (47) ಸುನೀಲ್ ಕೃಷ್ಣ ನಾಯರ್ (35) ಶಸಿ ಸೋಮಾ (35) ಹಾಸನ ತಾಲೂಕಿನ ಮಂಜೇಗೌಡ ಜವರೆಗೌಡ (35) ಬಂಧಿತ ಆರೋಪಿಗಳು.

ಜಾನುವಾರು ಹಾಗೂ ಲಾರಿಯ ಮೌಲ್ಯ 9.5 ಲಕ್ಷ ರೂ ಗಳೆಂದು ಅಂದಾಜಿಸಲಾಗಿದೆ. ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ ನಿರ್ದೇಶನದಲ್ಲಿ ಪಿಎಸ್‍ಐ ಶ್ರೀಧರ್ ಎಸ್. ಆರ್ ಮಾರ್ಗದರ್ಶನ ಮಾಡಿದ್ದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *