ಪ್ರಧಾನಿ ಮೋದಿ ಸ್ವಾಗತಕ್ಕೆ ಇನ್ಮುಂದೆ ಹೂಗುಚ್ಛ ನೀಡುವಂತಿಲ್ಲ- ಈ ವಸ್ತುಗಳನ್ನ ಮಾತ್ರ ನೀಡ್ಬಹುದು

 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ರಾಜ್ಯಗಳ ಪ್ರವಾಸದಲ್ಲಿ ತೊಡಗಿದಾಗ ಅವರನ್ನ ಸ್ವಾಗತಿಸಲು ಹೂಗುಚ್ಛ ಬಳಸದಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.

ಹೂಗುಚ್ಛದ ಬದಲು ಪ್ರಧಾನಿ ಮೋದಿಗೆ ಒಂದು ಹೂ ಜೊತೆಗೆ ಖಾದಿ ಕರವಸ್ತ್ರ ಅಥವಾ ಪುಸ್ತಕ ನೀಡಿ ಅವರನ್ನು ಸ್ವಾಗತಿಸಬಹುದು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳು ಪಾಲಿಸಬೇಕು ಎಂದು ಹೇಳಿದೆ. ಈ ಸೂಚನೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.

ಜೂನ್ 17ರಂದು ಕೇರಳದಲ್ಲಿ ಪಿಎನ್ ಪಣಿಕ್ಕರ್ ನ್ಯಾಷನಲ್ ರೀಡಿಂಗ್ ಡೇ ಗೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ಮೋದಿ, ಜನರು ಸ್ವಾಗತ ಕೋರಲು ಹೂಗುಚ್ಛದ ಬದಲು ಪುಸ್ತಕ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ಇದರಿಂದ ದೊಡ್ಡ ಬದಲಾವಣೆಯಾಗಬಹುದು ಎಂದು ಹೇಳಿದ್ದರು. ಅಲ್ಲದೆ ಸಾಕ್ಷರತೆಯ ವಿಷಯದಲ್ಲಿ ಕೇರಳ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಓದುವುದಕ್ಕಿಂತ ದೊಡ್ಡ ಖುಷಿ ಬೇರೊಂದಿಲ್ಲ. ಹಾಗೂ ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ ಎಂದು ಹೇಳಿದ್ದರು.

ಜೂನ್ 25ರ ಮನ್ ಕೀ ಬಾತ್ ಕಾರ್ಯಕ್ರಮದಲ್ಲೂ ಕೂಡ ಮೋದಿ ಹೂಗುಚ್ಛಗಳ ಕೊಡುಕೊಳುಗೆಯನ್ನು ನಿಲ್ಲಿಸಿ ಖಾದಿ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡುವಂತೆ ಹೇಳಿದ್ದರು. ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿತ್ತು. ಅವರು ಹೂಗುಚ್ಛಗಳ ಬದಲಾಗಿ ಪುಸ್ತಕವನ್ನ ಉಡುಗೊರೆಯಾಗಿ ನೀಡ್ತೀವಿ ಅಂದ್ರು. ನನಗದು ಇಷ್ಟವಾಯಿತು ಎಂದು ಮೋದಿ ಹೇಳಿದ್ದರು.

Comments

Leave a Reply

Your email address will not be published. Required fields are marked *