ಮಂಗ್ಳೂರಲ್ಲಿ ಹರ್ಭಜನ್ ಸಿಂಗ್- ಸೆಲ್ಫೀಗಾಗಿ ಮುಗಿಬಿದ್ದ ಅಭಿಮಾನಿಗಳು

ಮಂಗಳೂರು: ಕ್ರಿಕೆಟಿಗ ಹರ್ಭಜನ್ ಸಿಂಗ್ ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರು ನಗರಕ್ಕೆ ಆಗಮಿಸಿದ್ದರು.

ಇಂದು ಮಂಗಳೂರಿನ ಟಿ.ಎಂ.ಎ. ಪೈ ಹಾಲ್ ನಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಪುತ್ರನ ಮದುವೆಗಾಗಿ ಹರ್ಭಜನ್ ವಿಶೇಷ ಆಹ್ವಾನದ ಮೇರೆಗೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ಸಮಾರಂಭದಲ್ಲಿ ಪಾಲ್ಗೊಂಡರು.

ಮದುವೆ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮಿಂಚಿದರು. ಕಡುನೀಲಿ ಬಣ್ಣದ ಸೂಟ್ ಮತ್ತು ಹಳದಿ ಬಣ್ಣದ ಪಂಜಾಬಿ ಪೇಟ ಧರಿಸಿದ್ದ ‘ಭಜ್ಜಿ’ಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಂಡು ಫೋಟೊ ಕ್ಲಿಕ್ಕಿಸಿ ಖುಷಿಪಟ್ಟರು.

 

 

Comments

Leave a Reply

Your email address will not be published. Required fields are marked *