ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗಿತ್ತು: ಅಪರೂಪದ ವಿಡಿಯೋ ನೋಡಿ

ತುಮಕೂರು: ನಾಗರಹಾವು ಪ್ರಾಣಿಗಳನ್ನು ತಿನ್ನುವುದನ್ನು ನೀವು ಕೇಳಿರಬಹುದು. ಆದರೆ ಜಿಲ್ಲೆಯ ಗುಬ್ಬಿ ತಾಲೂಕಿನ ಅಡಗೂರು ಗ್ರಾಮದಲ್ಲಿ ನಾಗರಹಾವೊಂದು ಮತ್ತೊಂದು ನಾಗರಹಾವನ್ನು ನುಂಗುವ ಮೂಲಕ ಸುದ್ದಿಯಾಗಿದೆ.

ಗುರುವಾರ ರಾತ್ರಿ ಗ್ರಾಮದ ಕಾಂತರಾಜು ಅವರ ದನದ ಕೊಟ್ಟಿಗೆಗೆ ನಾಗರಹಾವೊಂದು ಬಂದಿದೆ. ಇದೇ ವೇಳೆ ಇನ್ನೊಂದು ನಾಗರಹಾವು ಕೊಟ್ಟಿಗೆಯ ಮರದ ಕಂಬದ ಮೇಲೆ ಇತ್ತು. ಈ ಎರಡೂ ಹಾವು ಪರಸ್ಪರ ಮುಖಾಮುಖಿಯಾಯ್ತು.

ಮೇಲಿರುವ ಹಾವು, ಕೆಳಗಿರುವ ನಾಗರಹಾವನ್ನು ನುಂಗಿದೆ. ನಾಗರಹಾವಿನ ಬಾಯಲ್ಲಿ ಹೋದ ಇನ್ನೊಂದು ಹಾವು ಉಸಿರುಗಟ್ಟಿ ಸತ್ತುಹೋಗಿದೆ. ನಂತರ ತುಮಕೂರಿನ ಉರಗ ತಜ್ಞ ವಿಪಿನ್ ರಾಯ್ ಸ್ಥಳಕ್ಕೆ ಆಗಮಿಸಿ ಬದುಕಿದ್ದ ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಈ ಅಪರೂಪದ ದೃಶ್ಯಾವಳಿಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

https://youtu.be/dTxQwEtuMpU

 

 

Comments

Leave a Reply

Your email address will not be published. Required fields are marked *