ವಿಜಯಪುರ: ವಿಕೃತ ಕಾಮಿ ಉಮೇಶ್ ರೆಡ್ಡಿ ಮೀರಿಸುವ ಕಾಮುಕನೊಬ್ಬ ವಿಜಯಪುರ ಪೊಲೀಸರ ಅತಿಥಿಯಾಗಿದ್ದಾನೆ.
ವಿಜಯಪುರದ ಜುಮ್ನಾಳ ಗ್ರಾಮದ ನಿವಾಸಿಯಾದ ಅಶೋಕ ನಾಯ್ಕೊಡಿ(43) ಬಂಧಿತ ವಿಕೃತ ಕಾಮಿ. ಈತ ವಿಜಯಪುರದ ಮನಗೂಳಿ ಗ್ರಾಮದ ಹತ್ತಿರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಅಶೋಕನ ಟಾರ್ಗೆಟ್ ಹೆಚ್ಚು ವೃದ್ಧೆಯರೇ ಅಗಿದ್ದು, ಚಿನ್ನಾಭರಣ ಧರಿಸಿದ ಮಹಿಳೆಯರನ್ನು ಕೂಡ ಈತ ಬಿಡುತ್ತಿರಲಿಲ್ಲ. ವೃದ್ಧೆಯರು ಕಂಡರೆ ಸಾಕು ಡ್ರಾಪ್ ಕೊಡೋ ನೆಪದಲ್ಲಿ ತನ್ನ ಕಾರ್ ನಲ್ಲಿ ಕೊಂಡೊಯ್ದು ಅತ್ಯಾಚಾರ ಎಸಗಿ, ಚಿನ್ನಾಭರಣ ದೋಚುವುದೇ ಇವನ ಕಸುಬಾಗಿತ್ತು.

ಇದೇ ರೀತಿ ಅಶೋಕ ವಿಜಯಪುರ ಜಿಲ್ಲೆಯಲ್ಲಿಯೇ ಸುಮಾರು 32ಕ್ಕೂ ಹೆಚ್ಚು ಆತ್ಯಾಚಾರವೆಸಗಿದ್ದಾನೆ. ಈತನ ವಿರುದ್ಧ ವಿಜಯಪುರ ಜಿಲ್ಲೆಯ ಮನಗೂಳಿ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಕಾಮುಕ ಅಶೋಕಗೆ ಜೂಜಾಟದ ಹುಚ್ಚಿದ್ದು, ದುಡ್ಡು ಖಾಲಿ ಆಗುತ್ತಿದ್ದಂತೆ ಈ ರೀತಿ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಇಂದು ಅತ್ಯಾಚಾರಕ್ಕೆ ಯತ್ನಿಸಿ ರೆಡ್ ಹ್ಯಾಂಡ್ ಆಗಿ ಮನಗೂಳಿ ಗ್ರಾಮದ ಬಳಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಅಶೋಕನನ್ನು ವಶಕ್ಕೆ ಪಡೆದ ಪೊಲಿಸರು ತನಿಖೆ ಮುಂದುವರೆಸಿದ್ದಾರೆ.

Leave a Reply