ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

ಬೆಂಗಳೂರು: “ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತಿದೆ”

ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ದಯವಿಟ್ಟು ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು ಸುಳ್ಳು ಸುದ್ದಿಯಾಗಿದ್ದು ನಿಮ್ಮಲ್ಲಿ ಗೊಂದಲ ಮೂಡಿಸಿಲು ಯಾರೋ ಈ ಮಸೇಜ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಜಿಎಸ್‍ಟಿ ಬಂದ ಮೇಲೆ ದೇಶದಲ್ಲಿರುವ ಉತ್ಪನ್ನಗಳನ್ನು 5 ವರ್ಗದಲ್ಲಿ ವಿಂಗಡಿಸಿ ಅವುಗಳ ಮೇಲೆ ಶೂನ್ಯ ತೆರಿಗೆ, ಶೇ.5 ತೆರಿಗೆ, ಶೇ.12 ತೆರಿಗೆ, ಶೇ.18 ತೆರಿಗೆ, ಶೇ.28 ತೆರಿಗೆಯನ್ನು ಹಾಕಲಾಗುತ್ತದೆ. ಈ ತೆರಿಗೆ ಮಾಲ್ ಗಳಲ್ಲಿ  ನೀವು ಖರೀದಿ ಮಾಡಿದ ವಸ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ ಹೊರತು ಬಿಲ್‍ಗಳಿಗೆ ಅನ್ವಯವಾಗುವುದಿಲ್ಲ.

ಜಿಎಸ್‍ಟಿ ತೆರಿಗೆ ಸೇರಿ ಉತ್ಪನ್ನದ ಎಂಆರ್‍ಪಿ ನಿಗದಿಯಾಗುತ್ತದೆ. ಹೀಗಾಗಿ ಬಿಲ್‍ನಲ್ಲಿ ಮತ್ತೊಮ್ಮೆ ಜಿಎಸ್‍ಟಿ ತೆರಿಗೆ ಹಾಕುವುದಿಲ್ಲ.

ಹೀಗಾಗಿ ಯಾರಾದರೂ ನಿಮಗೆ ಈ ರೀತಿಯ ಮೆಸೇಜ್ ಕಳುಹಿಸಿದದರೆ ಅವರಿಗೆ ಇದು ಸುಳ್ಳು ಮೆಸೇಜ್. ಈ ರೀತಿ ಬಿಲ್ ಮೇಲೆ ತೆರಿಗೆ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿಬಿಡಿ.

ವಾಟ್ಸಪ್ ಸಂದೇಶದಲ್ಲಿ ಏನಿದೆ?
ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ತೆರಿಗೆ ಹಾಕಲಾಗುತ್ತಿದೆ. 0 ಯಿಂದ 1 ಸಾವಿರ ರೂ. ವರೆಗಿನ ಬಿಲ್‍ಗಳಿಗೆ ಯಾವುದೇ ತೆರಿಗೆ ಇಲ್ಲ. 1000 ರೂ. ನಿಂದ 1500 ರೂ. ವರೆಗಿನ ಬಿಲ್ ಗಳಿಗೆ ಶೇ.2.5 ತೆರಿಗೆ, 1500 ರೂ. ನಿಂದ 2500 ರೂ.ವರೆಗಿನ ಬಿಲ್‍ಗಳಿಗೆ ಶೇ.6, 2500 ರೂ. ನಿಂದ 4500 ರೂ.ವರೆಗಿನ ಬಿಲ್‍ಗಳಿಗೆ ಶೇ.18 ತೆರಿಗೆ ವಿಧಿಸಲಾಗುತ್ತಿದೆ. ದಯವಿಟ್ಟು ಈ ವಿಚಾರವನ್ನು ಎಲ್ಲರಿಗೆ ತಿಳಿಸಿ ಎನ್ನುವ ಸಂದೇಶ ಹರಿದಾಡುತ್ತಿದೆ.

ಇದನ್ನೂ ಓದಿ: ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್

Comments

Leave a Reply

Your email address will not be published. Required fields are marked *