ನೀರು ಕುಡಿಯಲು ಕಾಲುವೆಗಿಳಿದ ಇಬ್ಬರು ಕುರಿಗಾಯಿಗಳ ದುರ್ಮರಣ

ರಾಯಚೂರು: ದೇವದುರ್ಗದ ಜಾಗಟಗಲ್ ಬಳಿ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಬಿದ್ದು ಇಬ್ಬರು ಕುರಿಗಾಯಿಗಳು ಸಾವನ್ನಪ್ಪಿದ್ದಾರೆ.

ಬೆಳಗಾವಿಯ ಜೋಳಕುರಡಿ ಮೂಲದ 48 ವರ್ಷದ ಆಲಪ್ಪ ಹಾಗೂ 20 ವರ್ಷದ ಬಸವ ಸಾವನ್ನಪ್ಪಿರುವ ದುರ್ದೈವಿಗಳು. ನೀರು ಕುಡಿಯಲು ಕಾಲುವೆಗೆ ಇಳಿದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಒಬ್ಬನನ್ನು ಕಾಪಾಡಲು ಹೋಗಿ ಕೊನೆಗೆ ಇಬ್ಬರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾಲುವೆ ದಂಡೆಯಲ್ಲಿ ಸಿಕ್ಕ ಚಪ್ಪಲಿ, ಊಟದ ಬುತ್ತಿ, ನೀರಿನ ಬಾಟಲ್ ಆಧಾರದ ಮೇಲೆ ಸಾವನ್ನ ಖಚಿತಪಡಿಸಿಕೊಂಡ ಗ್ರಾಮಸ್ಥರು ಶವಗಳನ್ನ ಹೊರತೆಗೆದಿದ್ದಾರೆ.

ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *