ಮಂಡ್ಯದ ಬಿಜೆಪಿ ಕಾರ್ಯಕರ್ತರಿಂದ ರಾಹುಲ್ ಗಾಂಧಿಗೆ ಕಾಂಪ್ಲಾನ್ ಕೊರಿಯರ್!

ಮಂಡ್ಯ: ಪ್ರಧಾನಿ ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಅಂತ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಯುವರಾಜ ರಾಹುಲ್‍ಗಾಂಧಿಗೆ ಮಂಡ್ಯದ ಬಿಜೆಪಿ ಕಾರ್ಯಕರ್ತರು ಮಕ್ಕಳು ಕುಡಿಯುವ ಕಾಂಪ್ಲಾನ್ ಕೊರಿಯರ್ ಮಾಡಿದ್ದಾರೆ.

ನಗರದ ಪೋಸ್ಟ್ ಆಫೀಸ್ ಬಳಿ ಅಗಮಿಸಿದ ಬಿಜೆಪಿ ಕಾರ್ಯಕರ್ತರು, ರಾಹುಲ್ ಗಾಂಧಿಯವರ ಟ್ವೀಟ್‍ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಪೋಸ್ಟ್ ಮೂಲಕ ರಾಹುಲ್ ಗಾಂಧಿಗೆ ಮಕ್ಕಳ ಬೆಳವಣಿಗೆಗೆ ಕುಡಿಸುವ ಕಾಂಪ್ಲಾನ್ ಪಾರ್ಸಲ್ ಕಳುಹಿಸಿದ್ರು.

ಮೊದಲು ಕಾಂಪ್ಲಾನ್ ಕುಡಿದು ದೊಡ್ಡವರಾಗಿ, ಆನಂತರ ಟ್ವಿಟ್ ಮಾಡಿ ಅಂತ ರಾಹುಲ್ ಗಾಂಧಿಗೆ ಪಾರ್ಸಲ್ ಜೊತೆ ಪತ್ರವನ್ನ ಕೂಡ ರವಾನಿಸಿದ್ರು. ದೇಶ ವಿದೇಶಗಳಲ್ಲಿ ಪ್ರಧಾನಿ ಮೋದಿಯವರ ಸ್ವಾಗತಕ್ಕೆ ರೆಡ್ ಕಾರ್ಪೆಟ್ ಹಾಕ್ತಿದ್ದಾರೆ. ಆದ್ರೆ ದೇಶದೊಳಗೆ ಈ ರೀತಿ ಹೇಳಿಕೆ ಕೊಡುವಂತದ್ದು ಎಳಸುತನ ಅಂತ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ರು.

Comments

Leave a Reply

Your email address will not be published. Required fields are marked *