ಕಲಬುರಗಿ: ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ನಡೆದಿದೆ. ಕಿಡ್ನ್ಯಾಪ್ ಮಾಡಿ ವ್ಯಕ್ತಿಯೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಹೊರವಲಯದ ಸೈಯದ್ ಚಿಂಚೋಳಿ ಬಳಿ ನಡೆದಿದೆ.

ಲಕ್ಷ್ಮೀಕಾಂತ್ ಅಲಿಯಾಸ್ ಶ್ರೀಕಾಂತ್ ಕೊಲೆಯಾದ ವ್ಯಕ್ತಿ. ಹಣಕಾಸಿನ ವಿಚಾರಕ್ಕೆ ಸಂಬಂಧಿಸದಂತೆ ಲಕ್ಷ್ಮೀಕಾಂತ್‍ರನ್ನು ಶುಕ್ರವಾರದಂದು ನಂದೂರ ಗ್ರಾಮದಿಂದ ರೌಡಿಶೀಟರ್ ಕರಿಚಿರತೆ & ಗ್ಯಾಂಗ್ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದರು. ನಂತರ ಮಾರಕಸ್ತ್ರಗಳಿಂದ ಲಕ್ಷ್ಮೀಕಾಂತ್‍ರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಹಂತಕರು ತಡರಾತ್ರಿ ಸೈಯದ್ ಚಿಂಚೋಳಿ ಬಳಿ ಶವವನ್ನ ಎಸೆದು ಹೋಗಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.








Leave a Reply