ಡಾ.ಕೆ.ಸುಧಾಕರ್ ರಾಜೀನಾಮೆ- ಸಂಸದ ವೀರಪ್ಪ ಮೊಯ್ಲಿ ಮನೆ ಮೇಲೆ ಕಲ್ಲು ತೂರಾಟ

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಸಕ ಸುಧಾಕರ್ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಾಸಕ ಸುಧಾಕರ್ ರಾಜೀನಾಮೆ ಘೋಷಣೆಗೆ ಚಿಕ್ಕಬಳ್ಳಾಪುರ ಸಂಸದ ಮೊಯ್ಲಿಯೂ ಕೂಡ ಕಾರಣಕರ್ತರು ಅಂತ ಸುಧಾಕರ್ ಬೆಂಬಲಿಗರು ವೀರಪ್ಪ ಮೊಯ್ಲಿ ಗೃಹಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಶಂಕರಮಠ ಎದುರಿನ ಸಂಸದ ಮೊಯ್ಲಿ ಗೃಹ ಕಚೇರಿ ಮೇಲೆ ಕಳೆದ ರಾತ್ರಿ ಕಲ್ಲು ತೂರಾಟ ನಡೆಸಲಾಗಿದೆ. ಇದ್ರಿಂದ ಕಚೇರಿಯ ಹಲವು ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಬಳ್ಳಾಪುರ ಪೊಲೀಸರು ಮೊಯ್ಲಿ ಗೃಹಕಚೇರಿ ಎದುರು ಮೊಕ್ಕಾಂ ಹೂಡಿದ್ದಾರೆ.

ಶಾಸಕ ಸುಧಾಕರ್ ರವರ ತಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರೂ ಆಗಿರುವ ಕೇಶವರೆಡ್ಡಿಯನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಚನೆ ನಿಡಿದ್ದರು. ಇದ್ರಿಂದ ಬೇಸತ್ತ ಸುಧಾಕರ್ ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಟ್ವಿಟರ್ ನಲ್ಲಿ ಘೋಷಣೆ ಮಾಡಿದ್ರು. ಅಧ್ಯಕ್ಷ ಸ್ಥಾನದಿಂದ ಕೆಳಗಿಸಳಿಸುವಂತೆ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಸಂಸದ ಮೊಯ್ಲಿ ಒತ್ತಾಯಿಸಿದ್ರು ಎನ್ನಲಾಗಿದೆ.

Comments

Leave a Reply

Your email address will not be published. Required fields are marked *