ತನ್ನ ವಯಸ್ಸು, ಎತ್ತರದಿಂದಾಗಿ ಗ್ರಾಮದಲ್ಲಿ ಈಗ ಇವ್ರು ಸೆಲೆಬ್ರಿಟಿ ಪರ್ಸನ್!

ಮಧ್ಯಪ್ರದೇಶ: ಎತ್ತರ ಬರೀ 29 ಇಂಚು. ಆದ್ರೆ ಇವರ ವಯಸ್ಸು 50. ಈಗ ಇವರು ಗ್ರಾಮದಲ್ಲಿ ಸೆಲೆಬ್ರಿಟಿಯಾಗಿ ಬದಲಾಗಿದ್ದಾರೆ.

ಹೌದು, ಮಧ್ಯಪ್ರದೇಶದ ಬಸೊರಿ ಲಾಲ್‍ಗೆ ಈಗ 50 ವರ್ಷದ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದರೂ ಇವರು ಈಗಲೂ ಎಳೆಯ ಬಾಲಕನಂತೆ ಕಾಣುತ್ತಿದ್ದಾರೆ.

ಸಾಮಾನ್ಯ ಮಗುವಿನಂತೆ ಹುಟ್ಟಿದ ಬಸೊರಿ ಲಾಲ್ ಐದು ವರ್ಷದವನಾಗಿದ್ದಾಗ ಬೆಳವಣಿಗೆ ನಿತ್ತಿತ್ತಂತೆ. ಹಾಗಾಗಿ 29 ಇಂಚು ಬೆಳೆದಿರುವ ಇವರು ಈಗಲೂ 6 ವರ್ಷದ ಹುಡುಗನಂತೆ ಕಾಣುತ್ತಿದ್ದಾರೆ.

ಮಗನ ದೇಹ ಬೆಳವಣಿಗೆಯಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಪೋಷಕರಿಗೆ ಏನೋ ಸಮಸ್ಯೆ ಇದೆ ಎಂದು ಗೊತ್ತಿದ್ದರೂ ಬಡತನದ ಕಾರಣದಿಂದಾಗಿ ವೈದ್ಯರ ಬಳಿ ಹೋಗಲಿಲ್ಲವಂತೆ. ಹೀಗಾಗಿ ಈತ ಕುಂಠಿತಗೊಂಡಿದ್ದರಿಂದ ಬೆಳವಣಿಗೆಗೆ ಕಾರಣ ಎಂದು ನಿಗೂಢವಾಗಿ ಹಾಗೆ ಉಳಿದಿದೆ ಅಂತೆ.

ಇವರ ಕುಟುಂಬದಲ್ಲಿ ಬಸೊರಿ ಮಾತ್ರ ಕುಳ್ಳವಾಗಿ ಜನಿಸಿದ್ದಾರೆ. ಸದ್ಯ ಬಸೊರಿ ಅವರ ಸಹೋದರನಾದ ಗೋಪಿ ಮತ್ತು ಅತ್ತಿಗೆಯಾದ ಸತಿಯಾಬಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ.

ನಾನು ಕುಬ್ಜವಾಗಿ ಇದ್ದರೂ ನನಗೆ ಯಾವುದೇ ಸಮಸ್ಯೆಯಿಲ್ಲ. ನನ್ನನ್ನು ನೋಡಲು ಪ್ರವಾಸಿಗರು ತುಂಬಾನೆ ಬರುತ್ತಿದ್ದಾರೆ. ನಾನು ತುಂಬಾ ಕುಳ್ಳಗೆ ಇದ್ದರೂ ಯಾವುದೇ ಮುಜಗರವಾಗುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನಾನು ಪ್ರತಿ ದಿನ ಎಲ್ಲಂರಂತೆ ಕೆಲಸ ಮಾಡುತ್ತೇನೆ. ನನಗೆ ಎತ್ತರ ಎಂದೂ ಸಮಸ್ಯೆಯಾಗಿಲ್ಲ, ಎಲ್ಲರಂತೆಯೇ ನಾನು ಕ್ಷೇಮವಾಗಿದ್ದೇನೆ. ಇನ್ನು ಇದೇ ಎತ್ತರದಿಂದ ದೊಡ್ಡ ಸೆಲೆಬ್ರಿಟಿ ಕೂಡ ಆಗಿದ್ದೇನೆ ಎಂದು ಸಂತೋಷದಿಂದ ಬಸೊರಿ ಲಾಲ್ ಹೇಳುತ್ತಾರೆ.

https://www.youtube.com/watch?v=y55UJGsQQrc

 

Comments

Leave a Reply

Your email address will not be published. Required fields are marked *