ಶಾಲೆಯಲ್ಲಿ ಕುಡಕನ ಅವಾಜ್- ಮಕ್ಕಳ ಕಷ್ಟಕ್ಕೆ ಸ್ಪಂದಿಸದ ಶಿಕ್ಷಣ ಇಲಾಖೆ ಅಧಿಕಾರಿಗಳು!

ಯಾದಗಿರಿ: ಸರ್ಕಾರಿ ಪ್ರೌಢ ಶಾಲೆಯಲ್ಲಿ ದ್ವೀತಿಯ ದರ್ಜೆ ನೌಕರನೊಬ್ಬ ಕರ್ತವ್ಯದಲ್ಲಿದ್ದ ವೇಳೆ ಕುಡಿದ ಮತ್ತಿನಲ್ಲಿ ಬಂದು ರಂಪಾಟ ಮಾಡುತ್ತಿದ್ದು, ಜ್ಞಾನ ದೇಗುಲದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡದೆ ಪ್ರತಿದಿನ ಶಾಲೆ ಆವರಣದಲ್ಲಿ ಕಾಲ ಕಳೆವಂತಾಗಿದೆ.

ಹೌದು, ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಕೊಂಕಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಪ್ರತಿದಿನ ಶಾಲೆಯಲ್ಲಿ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ದ್ವೀತಿಯ ದರ್ಜೆ ನೌಕರನಾದ ಶಿವಶರಣಪ್ಪನ ರಂಪಾಟದಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಅಲ್ಲದೆ ಶಿವಶರಣಪ್ಪ ಕುಡಿದ ಅಮಲಿನಲ್ಲಿ ಶಾಲೆಗೆ ಬರುವುದನ್ನು ನೋಡಿ ವಿದ್ಯಾರ್ಥಿಗಳನ್ನು ಪೋಷಕರು ಶಾಲೆಗೆ ಕಳುಹಿಸುತ್ತಿಲ್ಲ. ಶಾಲೆಗೆ ಬಂದಿರುವ ಮಕ್ಕಳು ವಿದ್ಯಾಭ್ಯಾಸ ಮಾಡಲು ಬೇಸತ್ತಿದ್ದಾರೆ.

ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಈ ಕುಡಕ ಸಿಬ್ಬಂದಿಯ ರಂಪಾಟ ತಡೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಅನಕೂಲ ಮಾಡಬೇಕಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರೋ ಡಿಡಿಪಿಐ ಕೆಂಚೇಗೌಡ, ಶಿವಶರಣಪ್ಪನ ಮೇಲೆ ಕ್ರಮ ಕೈಗೋಳ್ಳುತ್ತೆನೆ ಅಂತಾ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *