ಒಲಿಂಪಿಕ್ಸ್ ಚಾಂಪಿಯನ್ ಸೋಲಿಸಿ ಆಸ್ಟ್ರೇಲಿಯನ್ ಓಪನ್ ಗೆದ್ದ ಶ್ರೀಕಾಂತ್

ಸಿಡ್ನಿ: ಭಾರತದ ಕಿಡಂಬಿ ಶ್ರೀಕಾಂತ್ ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಚೀನಾದ ಆಟಗಾರ ಚೆಂಗ್ ಲಾಂಗ್ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ವಿಶ್ವದ 11ನೇ ಶ್ರೇಯಾಂಕದ ಶ್ರೀಕಾಂತ್ ಅವರು ವಿಶ್ವದ ಮಾಜಿ ನಂಬರ್ ಒನ್ ಪ್ರಸ್ತುತ 4ನೇ ಶ್ರೇಯಾಂಕದ ಚೀನಾದ ಚೆಂಗ್ ಲಾಂಗ್ ಅವರನ್ನು 21-10, 21-14 ಅಂತರದಲ್ಲಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು.

ಕ್ವಾರ್ಟರ್ ಹಾಗೂ ಸೆಮಿಫೈನಲ್‍ನಲ್ಲಿ ಚೀನಾ ಹಾಗೂ ಮಲೇಷ್ಯಾ ಆಟಗಾರರ ವಿರುದ್ಧ ಜಯಸಾಧಿಸಿ ಫೈನಲ್‍ಗೆ ಎಂಟ್ರಿಯಾಗಿದ್ದ ಕಿಡಂಬಿ ಆರಂಭದಿಂದಲೇ ಡ್ರಾಪ್ ಮತ್ತು ಸ್ಮಾಷ್ ಹೊಡೆಯುವ ಮೂಲಕ ಚೆಂಗ್ ಲಾಂಗ್ ಅವರನ್ನು ಸುಲಭವಾಗಿ ಮಣಿಸಿದರು.

ಈ ವರ್ಷದ ಅತ್ಯುತ್ತಮ ಫಾರ್ಮ್ ನಲ್ಲಿರುವ  24 ವರ್ಷದ ಶ್ರೀಕಾಂತ್ ಏಪ್ರಿಲ್‍ನಲ್ಲಿ ಸಿಂಗಾಪುರ ಓಪನ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಸಾಯಿ ಪ್ರಣೀತ್ ವಿರುದ್ಧ ಸೋತಿದ್ದರು. ಜೂನ್ 18ರಂದು ಇಂಡೋನೇಷ್ಯಾ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಶ್ರೀಕಾಂತ್ ಒಂದು ವಾರದಲ್ಲಿ ಮತ್ತೊಂದು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಚೆಂಗ್ ಲಾಂಗ್ ಮತ್ತು ಶ್ರೀಕಂತ್ ನಡುವೆ ಇದೂವರೆಗೆ 6 ಪಂದ್ಯಗಳು ನಡೆದಿದ್ದು, ಇದೇ ಮೊದಲ ಬಾರಿಗೆ ಕಿಡಂಬಿ ಜಯಗಳಿಸುವ ಮೂಲಕ 75 ಲಕ್ಷ ಡಾಲರ್(ಅಂದಾಜು 4.83 ಕೋಟಿ ರೂ.) ನಗದು ಬಹುಮಾನ ಗೆದ್ದಿದ್ದಾರೆ.

 

https://twitter.com/TrollywoodOffl/status/878870639842545664

Comments

Leave a Reply

Your email address will not be published. Required fields are marked *