ಸಿಯೋಲ್: ನೀರು ಕುಡಿಯುವ ವೇಳೆ ಮರಿಯಾನೆಯೊಂದು ಕೊಳಕ್ಕೆ ಬಿದ್ದಿದ್ದು, ಈ ಮರಿಯಾನೆಯನ್ನು ಎರಡು ಆನೆಗಳು ರಕ್ಷಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ.
ದಕ್ಷಿಣ ಕೊರಿಯಾದ ಸಿಯೋಲ್‍ನ ಗ್ರಾಂಡ್ ಪಾರ್ಕ್ ಮೃಗಾಲಯದ ಪೂಲ್‍ನಲ್ಲಿ ನೀರು ಕುಡಿಯುತ್ತಿದ್ದ ಮರಿಯಾನೆ ಆಯತಪ್ಪಿ ನೀರಿನೊಳಗೆ ಬಿದ್ದಿದೆ. ಇದನ್ನು ನೋಡಿದ ತಕ್ಷಣ ಅಲ್ಲೇ ಇದ್ದ 2 ಆನೆಗಳು ಮರಿಯಾನೆ ರಕ್ಷಿಸಲು ಇಲ್ಲದ ಪಾಡುಪಟ್ಟು ಕೊನೆಗೂ ಪೂಲ್‍ನೊಳಗೆ ಇಳಿದು ನೀರಿನಿಂದ ಹೊರತಂದಿವೆ.
ಇವರಿಬ್ಬರಿಗೆ ಸಹಾಯ ಮಾಡಲು ಆಗದ ಬೇಲಿ ಒಳಗಿದ್ದ ಆನೆಯೊಂದು ಅಯ್ಯೋ ಇವರಿಗೆ ನಾನು ಸಹಾಯ ಮಾಡಲಿಕ್ಕಿ ಆಗುತ್ತಿಲ್ಲವಲ್ಲ ಎಂದು ಅತ್ತಿಂದಿತ್ತ, ಇತ್ತಿಂದತ್ತ ಅಸಹಾಯಕನಂತೆ ಓಡಾಡುತ್ತಿದ್ದಿದ್ದನ್ನು ವಿಡಿಯೋದಲ್ಲಿ ನೋಡಬಹುದು.
https://youtu.be/x0afNIy08IE





Leave a Reply