ಕಡುಬಡತನದಲ್ಲಿರೋ ಯಾದಗಿರಿ ದಂಪತಿಗೆ ತಮ್ಮ ಮಗನ ಮುಖ ಸರಿಪಡಿಸಲು ಬೇಕಿದೆ ಸಹಾಯ

ಯಾದಗಿರಿ: ಆ ಮಗುವಿಗೆ ತನ್ನ ಕೈತುತ್ತು ತಿನ್ನುವಾಸೆ. ಆದ್ರೆ ತಾಯಿಯ ಆಸರೆ ಇಲ್ಲದೆ ಮಗುವಿಗೆ ಬದಕಲು ಆಗುತ್ತಿಲ್ಲ. ಪುಟ್ಟ ಮಗುವಿನ ಕನಸು ತನ್ನ ಗೆಳೆಯ ಜೊತೆ ಎಲ್ಲರಂತೆ ಆಟವಾಡಿ ಬೆಳೆದು ದೂಡ್ಡವನಾಗಬೇಕು ಅಂತಾ ಆಸೆ. ಆದ್ರೆ ಆ ಮಗುವಿನ ರೂಪವು ವಿಕೃತವಾಗಿರುವುದರಿಂದ ಯಾರು ಹತ್ರ ಸೇರಿಸಿಕೊಳ್ಳೊದಿಲ್ಲ. ಆ ಮಗುವಿಗೆ ಚಿಕಿತ್ಸೆ ನೀಡಿಸಲು ಹಣವಿಲ್ಲದೆ ಒದ್ದಾಡುತ್ತಿರುವ ಕುಟುಂಬದವರ ಕಣ್ಣೀರಿನ ಕಥೆ ಇದಾಗಿದೆ.

ಹೌದು. ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದಲ್ಲಿರುವ ಹಳ್ಯಪ್ಪ-ಕಾಶಮ್ಮ ದಂಪತಿಗೆ ಮೂರು ಜನ ಗಂಡು ಮಕ್ಕಳು. ಅದರಲ್ಲಿ ಮೊದಲನೆಯ ಮಗ ರಾಘವೆಂದ್ರನಿಗೆ ಪಿಡ್ಸ್ ಕಾಯಿಲೆಯಿತ್ತು. ಈ ವೇಳೆ ಆಸ್ಪತ್ರೆಗೆ ತೋರಿಸಿ ವಾಸಿ ಮಾಡಿಸುವಷ್ಟರಲ್ಲಿ ಮೂರನೆ ಮಗನಾದ ಜಯಂತಕುಮಾರ ಒಂಬತ್ತು ತಿಂಗಳ ಮಗುವಿದ್ದಾಗ ಒಲೆಗೆ ಬಿದ್ದ ಪರಿಣಾಮ ಕೈಗಳು ಸುಟ್ಟು ವಿಕೃತವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹಣವಿಲ್ಲದೆ ಪೋಷಕರು ದಾನಿಗಳಿಗೆ ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ.

ಹಳ್ಳೆಪ್ಪನು ದಿನ ಕಲ್ಲು ಒಡೆದು 300 ರೂಪಾಯಿ ಸಂಪಾದಿಸಿದ ಹಣದಿಂದ ಕುಟುಂಬದ ಹೊಟ್ಟೆ ಮಾತ್ರ ತುಂಬುತ್ತೆ. ಆದ್ರೆ ಮಗುವಿನ ವಿಕೃತವಾಗಿರುವ ಮುಖವನ್ನು ಸುಂದರ ರೂಪಕ್ಕೆ ತರಲು ಸಾಕಷ್ಟು ಹಣ ಬೇಕಾಗುತ್ತೆ ಅಂತ ವೈದ್ಯರು ಹೇಳಿದ್ದಾರೆ. ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿರುವ ಆಸ್ಪತ್ರೆಗಳಿಗೆ ತಮ್ಮ ಬಳಿ ಇದ್ದ ಹಣದಲ್ಲಿ ಜಯಂತನಿಗೆ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಹಣವಿಲ್ಲದ ಕಾರಣ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಪೋಷಕರು ಚಿಂತಿಸುವಂತಾಗಿದೆ. ಮಗುವಿನ ಮುಖವನ್ನು ಸುಂದರ ರೂಪಕ್ಕೆ ತರಲು ಸಾಕಷ್ಟು ಹಣ ಬೇಕಾಗುತ್ತೆ. ಈ ಹಣ ಹೊಂದಿಸಲು ಕಷ್ಟವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ವೆಚ್ಚ ಭರಿಸಲು ಪೋಷಕರು ಪಬ್ಲಿಕ್ ಟವಿಯ ಮೊರೆಬಂದಿದ್ದಾರೆ.

ಓದು ಬರಹ ಬಾರದ ಪೋಷಕರಿಗೆ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಆಸೆಯೂ ಅವರದ್ದು. ಆದ್ರೆ ಇತ್ತ ಬಡತನದಲ್ಲಿ ಹುಟ್ಟಿರುವ ಮಗುವಿಗೆ ತನಗೆ ಏನಾಗಿದೆ ಅನ್ನೊದು ಅರಿವು ಸಹ ಇಲ್ಲ. ಆಟ ಆಡಲೆಂದು ಮಕ್ಕಳ ಜೊತೆ ಬೆರೆಯಲು ಮುಂದಾದಾಗ ಮಗುವಿನ ವಿಕೃತವಾಗಿರುವ ಮುಖವನ್ನು ನೋಡಿ ಬೇರೆ ಮಕ್ಕಳು ದೂರಹೋಗುತ್ತಿವೆ. ಒಟ್ಟಿನಲ್ಲಿ ತನ್ನ ಮಗನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹಳ್ಯಪ್ಪನ ಕೈಯಲ್ಲಿ ಹಣವಿಲ್ಲದ ಕಾರಣ ದಂಪತಿ ದಾನಿಗಳತ್ತ ಮುಖಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *