ಆಹಾರ ಅರಸಿ ಗ್ರಾಮಕ್ಕೆ ಬಂತು 15 ಅಡಿಯ ಮೊಸಳೆ

ವಿಜಯಪುರ: ಮೊಸಳೆಯೊಂದು ಆಹಾರ ಅರಸುತ್ತಾ ವಿಜಯಪುರ ತಾಲೂಕಿನ ಹೊಳೆಹಂಗರಗಿ ಗ್ರಾಮಕ್ಕೆ ಬಂದು ಗ್ರಾಮಸ್ಥರನ್ನು ಭಯಗೊಳಿಸಿದ ಘಟನೆ ನಡೆದಿದೆ. ಒಂದೇ ವಾರದಲ್ಲಿ ಗ್ರಾಮಕ್ಕೆ ಬಂದ ಎರಡನೇ ಮೊಸಳೆ ಇದಾಗಿದೆ.

ಭೀಕರ ಬರಗಾಲ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯ ಖಾಲಿಯಾದ ಪರಿಣಾಮ ಮೊಸಳೆಗಳು ಆಹಾರಕ್ಕಾಗಿ ನದಿಪಾತ್ರದ ಗ್ರಾಮಗಳಿಗೆ ಬರತೊಡಗಿವೆ. ಮೊಸಳೆಯನ್ನ ಕಂಡ ಗ್ರಾಮಸ್ಥರು ಅದನ್ನ ಸೆರೆಹಿಡಿಯುವಲ್ಲಿ ಯಶ್ವಸಿಯಾಗಿದ್ದಾರೆ.

ನದಿಯಲ್ಲಿ ನೀರು ಕಡಿಮೆಯಾದ್ದರಿಂದ ಮೊಸಳೆಗಳು ಗ್ರಾಮಕ್ಕೆ ಲಗ್ಗೆಯಿಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ರೂ ಇದುವರೆಗೂ ಯಾರು ಸಹ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬರಿದಾದ ಕೃಷ್ಣೆಯ ಒಡಲು: 24 ಗಂಟೆಯಲ್ಲಿ ಮೂರು ಮೊಸಳೆಗಳ ಸಾವು

Comments

Leave a Reply

Your email address will not be published. Required fields are marked *