– ಅನಗತ್ಯವಾಗಿ ಮತ್ತೆ ಮಾತಾಡಿ ವಿವಾದ ಸೃಷ್ಟಿಸಲ್ಲ
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಕದನ ತಾರಕಕ್ಕೇರಿದೆ. ಈ ನಡುವೆ ಅನಗತ್ಯವಾಗಿ ಮತ್ತೆ ಮಾತಾಡಿ ವಿವಾದ ಸೃಷ್ಟಿಸಲ್ಲ ಎಂದು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬರ್ಥದ ಹೇಳಿಕೆಗೆ ಮೇಲ್ಮನೆ ಸದಸ್ಯ ಹಾಗೂ ಸಿಎಂ ಪುತ್ರ ಯತೀಂದ್ರ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಚಾಮುಂಡಿ ತಾಯಿಯ ಕ್ಷಮೆ ಕೇಳು: ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಆಗ್ರಹ
ಪಕ್ಷದ ಶಿಸ್ತುಕ್ರಮದ ನೋಟಿಸ್ ಬೆದರಿಕೆಗೂ ಬಗ್ಗದೇ ನಾನು ಹೇಳಿದ್ರಲ್ಲಿ ತಪ್ಪೇನಿದೆ ಅಂತ ಪುನರುಚ್ಛರಿಸಿದ್ದಾರೆ. ನನ್ನ ಹೇಳಿಕೆ ವಿವಾದ ಸ್ವರೂಪ ಪಡೆದಾಗಲೇ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಅನಗತ್ಯವಾಗಿ ಮತ್ತೆ ಮಾತಾಡಿ ವಿವಾದ ಸೃಷ್ಟಿಸಲ್ಲ ಅಂದಿದ್ದಾರೆ.
ಪಕ್ಷ ನೋಟಿಸ್ ಕೊಟ್ಟರೆ ನೋಡಿಕೊಳ್ಳೋಣ ಬಿಡಿ, ಅಲ್ಲದೇ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿ ಅಧಿಕಾರ ಪೂರೈಸ್ತಾರೆ. ನವೆಂಬರ್ ಕ್ರಾಂತಿ ಅನ್ನೋದೆಲ್ಲಾ ಊಹಾಪೋಹ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ನ ಆರೋಪಿ ಪ್ರದೋಷ್ ತಂದೆ ನಿಧನ – 20 ದಿನ ಮಧ್ಯಂತರ ಜಾಮೀನು ನೀಡಿದ ಕೋರ್ಟ್
