ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ (Gold Jewellery) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ ಈಗ ಕೊಂಚ ಇಳಿಕೆಯಾಗಿದೆ.
ಪ್ರತಿ ಗ್ರಾಂಗೆ ಚಿನ್ನ ಕಳೆದ 2-3 ದಿನಗಳಿಂದ 600 ರೂ. ಇಳಿಕೆ ಕಂಡಿದೆ. ಇನ್ನು 1.95 ಲಕ್ಷ ರೂ.ವರೆಗೆ ಏರಿಕೆ ಕಂಡಿದ್ದ ಬೆಳ್ಳಿ ದರ 1.58 ಲಕ್ಷ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್ ಬಾಂಬ್? ವಿಶ್ವದ ಮೇಲೆ ಪರಿಣಾಮ ಏನು?

ದಿಢೀರ್ ಇಳಿಕೆಗೆ ಕಾರಣ ಏನು?
* ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
* ಅಮೆರಿಕ-ಭಾರತದ ಮಧ್ಯೆ ಕಚ್ಚಾ ತೈಲದ ವ್ಯಾಪಾರದ ಮುನ್ಸೂಚನೆ
* ಮುಂದಿನ ದಿನದಲ್ಲಿ ತೈಲ (Oil) ವ್ಯಾಪಾರದ ಮುನ್ಸೂಚನೆ
* ತಿಳಿಯಾದ ಚೀನಾ-ಅಮೆರಿಕ ಜಾಗತಿಕ ವ್ಯಾಪಾರ
ಚಿನ್ನ, ಬೆಳ್ಳಿ ದರ ಡಿಸೆಂಬರ್ ವೇಳೆಯಲ್ಲಿ ಇನ್ನಷ್ಟು ಕಡಿತಗೊಳ್ಳುವ ನಿರೀಕ್ಷೆಯಿದೆ ಅನ್ನೋದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ
