ದೀಪಾವಳಿ ಗಿಫ್ಟ್‌ – ದುಬಾರಿ ಕಾರುಗಳನ್ನೇ ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

ಚಂಡೀಗಢ: ಉದ್ಯೋಗಿಗಳ ಕಾರ್ಯಗಳನ್ನು ಗುರುತಿಸುವ ವಿನೂತನ ಮಾದರಿಯನ್ನು ಕಳೆದ ಕೆಲ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಔಷಧ ತಯಾರಿಕಾ ಕಂಪನಿಯ ಮಾಲೀಕ ಎಂ.ಕೆ. ಭಾಟಿಯಾ, ಈ ದೀಪಾವಳಿಗೂ (Deepavali) ಕಂಪನಿ ನೌಕರರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಬೋನಸ್, ಸ್ವೀಟ್ ಬದಲಿಗೆ ದುಬಾರಿ ಕಾರುಗಳನ್ನೇ ಉಡುಗೊರೆಯಾಗಿ (Diwali Festive Gift) ನೀಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.

ಹರಿಯಾಣದ ಖ್ಯಾತ ಉದ್ಯಮಿ ಹಾಗೂ ಮಿಟ್ಸ್ ಕಾರ್ಟ್ ಸಂಸ್ಥೆಯ ಮಾಲೀಕ ಎಂ.ಕೆ ಭಾಟಿಯಾ (MK Bhatia) ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ಮಾಡೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ 12 ಜನ ನೌಕರರಿಗೆ ವಿವಿಧ ಬಣ್ಣದ ಟಾಟಾ ಪಂಚ್ ಕಾರುಗಳನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಶ್ರೀರಾಮನಗರಿಯಲ್ಲಿ ಝಗಮಗಿಸಿದ ದೀಪೋತ್ಸವ – 26 ಲಕ್ಷ ದೀಪಗಳಿಂದ ಕಂಗೊಳಿಸಿದ ಅಯೋಧ್ಯೆ

ಈವರೆಗೂ 51 ನೌಕರರಿಗೆ ಎಸ್‌ಯುವಿ ಕಾರುಗಳ ಉಡುಗೊರೆ ನೀಡಿದ್ದಾರೆ. ಉದ್ಯಮದೊಂದಿಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿರುವ ಭಾಟಿಯಾ ಹರಿಯಾಣದ ಪಂಚಕುಲಾದಲ್ಲಿ ಮಿಟ್ಸ್‌ ಕಾರ್ಟ್‌ ಎಂಬ ಕಂಪನಿ ಹೊಂದಿದ್ದಾರೆ. ಪ್ರತಿ ಸಲ ದೀಪಾವಳಿ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡ್ತಾ ಬಂದಿದ್ದಾರೆ. ಇದನ್ನೂ ಓದಿ: ಬೆಳಕಿನ ಹಬ್ಬ ಎಲ್ಲರ ಜೀವನವನ್ನು ಸಾಮರಸ್ಯ, ಸಂತೋಷ, ಸಮೃದ್ಧಿಯಿಂದ ಬೆಳಗಲಿ – ದೀಪಾವಳಿಗೆ ಮೋದಿ ವಿಶ್

ಅದೇ ರೀತಿ ಈ ಬಾರಿಯೂ ಉದ್ಯೋಗಿಗಳನ್ನು ಕಾರ್ ಶೋರೂಮ್‌ಗೆ ಕರೆದೊಯ್ದು ಹೊಸ ಕಾರುಗಳನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಕಾರು ಸ್ವೀಕರಿಸಿದ ಸಿಬ್ಬಂದಿ ಶೋರೂಮ್‌ನಿಂದ ಕಚೇರಿವರೆಗೂ ಕಾರು ಓಡಿಸುತ್ತಾ ಬಂದು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ