ರಘು ದೀಕ್ಷಿತ್, ವಾರಿಜಶ್ರೀ ಮದುವೆ ಡೇಟ್ ಫಿಕ್ಸ್

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ (Raghu Dixit) ಮದುವೆ ಸುದ್ದಿ ಕೇಳಿಬಂದಿತ್ತು. ಇದೀಗ ದಿನಾಂಕವೂ ಫಿಕ್ಸ್ ಆಗಿರೋದು ತಿಳಿದುಬಂದಿದೆ. ಇದೇ ತಿಂಗಳ 26 ರಂದು ರಘು ದೀಕ್ಷಿತ್ ಹಾಗೂ ಗಾಯಕಿ ವಾರಿಜಶ್ರೀ ವೇಣುಗೋಪಾಲ್ (Varijashree Venugopal) ವಿವಾಹ ನಡೆಯಲಿದೆ.

ಬೆಂಗಳೂರಿನದ ಜಯನಗರ ಬಳಿಯ ಮದುವೆ ಮಂಟಪದಲ್ಲಿ ರಘು ದೀಕ್ಷಿತ್ ಗಾಯಕಿ ವಾರಿಜಶ್ರೀ ಜೊತೆ ಹೊಸ ಜೀವನ ಪ್ರಾರಂಭಿಸಲಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ

ಮೊದಲ ಪತ್ನಿ ಮಯೂರಿಯಿಂದ 2019ರಲ್ಲಿ ರಘು ವಿಚ್ಛೇದನ ಪಡೆದಿದ್ದರು. ಬಳಿಕ ಅವರ ಏಕಾಂಗಿ ಬದುಕಲ್ಲಿ ವಾರಿಜಶ್ರೀ ಆಗಮನವಾಗಿದೆ. ಕೆಲಸದ ಪ್ರಯುಕ್ತ ಇಬ್ಬರ ಭೇಟಿ ಸ್ನೇಹಕ್ಕೆ ತಿರುಗಿ ಬಳಿಕ ಪ್ರೀತಿಯಾಗಿ ಇದೀಗ ಈ ಗಾಯಕ ಗಾಯಕಿ ಡ್ಯುಯೆಟ್ ಹಾಡಲು ಸಿದ್ಧರಾಗಿದ್ದಾರೆ.

ರಘು ದೀಕ್ಷಿತ್ ಸಿನಿಮಾ ಹಾಗೂ ಶಾಸ್ತ್ರೀಯ ಸಂಗೀತದಲ್ಲಿ ಗುರುತಿಸಿಕೊಂಡವರು. ವಾರಿಜಶ್ರೀ ಹೆಚ್ಚು ಗುರುತಿಸಿಕೊಂಡಿರುವುದು ಶಾಸ್ತ್ರೀಯ ಸಂಗೀತ ಪ್ರಕಾರಗಳಲ್ಲಿ. ಇದೀಗ ಇಬ್ಬರೂ ಒಂದಾಗುತ್ತಿದ್ದಾರೆ. ಇದನ್ನೂ ಓದಿ: ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!