1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್‌ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್

– 15 ಜನರ ವಿರುದ್ಧ ಬಿತ್ತು ಕೇಸ್‌; ಕಿಂಗ್‌ಪಿನ್‌ ನಯನಾ ಅರೆಸ್ಟ್‌

ಬೆಂಗಳೂರು: ನಗರದಲ್ಲೊಂದು ಖತರ್ನಾಕ್‌ ಗ್ಯಾಂಗ್‌ ಹುಟ್ಟಿಕೊಂಡಿದೆ. ಕಡಿಮೆ ಬಡ್ಡಿಗೆ ಲೋನ್‌ (Loan) ಕೊಡಿಸ್ತೀವಿ ಅಂತ ಬಂದು ಗ್ರಾಹಕರಿಂದ ಹಣ ಪೀಕಿ ಎಸ್ಕೇಪ್‌ ಆಗ್ತಾರೆ. ಇದೇ ರೀತಿ ಜನರನ್ನ ಯಾಮಾರಿಸುತ್ತಿದ್ದ ಖತರ್ನಾಕ್‌ ಲೇಡಿ ಗ್ಯಾಂಗ್‌ವೊಂದು ಪೊಲೀಸರ ಬಲೆಗೆ ಬಿದ್ದಿದೆ. ಪ್ರಕರಣ ಕಿಂಗ್‌ಪಿನ್‌ ಲೇಡಿಯನ್ನ (Lady Gang) ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಹೌದು.. ಸುಬ್ಬಲಕ್ಷ್ಮಿ ಚಿಟ್‌ ಫಂಡ್‌ (Chit Fund) ಹೆಸರಿನಲ್ಲಿ 1 ರೂಪಾಯಿ ಬಡ್ಡಿಗೆ ಲೋನ್‌ ಕೊಡಿಸ್ತೀವಿ ಅಂತ ನಂಬಿಸಿದ್ದ ಲೇಡಿಗ್ಯಾಂಗ್‌ ಗ್ರಾಹಕರೊಬ್ಬರಿಗೆ 30 ರೂ. ಪಡೆದು ವಂಚನೆ ಎಸಗಿತ್ತು. ದೂರು ಪಡೆದು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕಿಂಗ್‌ಪಿನ್‌ ಲೇಡಿಯನ್ನ ಬಂಧಿಸಿದ್ದಾರೆ. ವಿಚಾರಣೆ ಬಳಿಕ ಒಟ್ಟು 15 ಜನರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

ಈ ಗ್ಯಾಂಗ್‌ ಪಂಗನಾಮ ಹಾಕಿದ್ದು ಹೇಗೆ?
1 ರೂ.ಪಾಯಿಗೆ ಲೋನ್‌ ಕೊಡ್ತಿಸ್ತೀವಿ ಅಂದಿದ್ದ ಈ ಗ್ಯಾಂಗ್‌ ಗ್ರಾಹಕರಿಂದ ಲೋನ್‌ ಪ್ರೊಸೆಸಿಂಗ್‌ಗೆ 30 ರೂ. ಹಣ ಪಡೆದುಕೊಂಡಿತ್ತು. ಕಿಂಗ್‌ ಪಿನ್‌ ನಯನಾ ನಮ್ಮ ಸಂಬಂಧಿ ಸುಬ್ಬಲಕ್ಷ್ಮಿ ಚಿಟ್ ಫಂಡ್‌ನಲ್ಲಿ ಕೆಲ್ಸ ಮಾಡ್ತಿದ್ದಾರೆ. 10 ಲಕ್ಷ ಲೋನ್ ಕೊಡಿಸ್ತಾರೆ, ಬರೀ 1 ರೂಪಾಯಿ ಬಡ್ಡಿ ಅಷ್ಟೇ ಅಂತ ಹೇಳಿದ್ದಾಳೆ. ನಂತ್ರ ಲೋನ್‌ ಮಂಜೂರಾಗಬೇಕಾದ್ರೆ, ಮೊದಲೇ 3 ಇಎಂಐ ಕಟ್ಟಬೇಕು. ತಿಂಗಳಿಗೆ 10 ಸಾವಿರದಂತೆ 30 ಸಾವಿರ ರೂ. ಇಎಂಐ, ಜೊತೆಗೆ ಪ್ರೊಸೆಸಿಂಗ್‌ ಶುಲ್ಕ 5 ಸಾವಿರ ರೂ. ಕಟ್ಟಬೇಕು ಅಂತ ಹೇಳಿದ್ದಾರೆ. ಕೊನೆಗೆ ಎಲ್ಲರಿಗೂ ಒಟ್ಟಿಗೆ ಲೋನ್‌ ರಿಲೀಸ್‌ ಮಾಡ್ತೇವೆ ಅಂತ ಹೇಳಿ ಅಬೇಸ್‌ ಆಗಿದ್ದಾರೆ. ಇದನ್ನೂ ಓದಿ: ದುರ್ಗಾಪುರ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್‌ – ಜೊತೆಗಿದ್ದ ಸ್ನೇಹಿತನೇ 6ನೇ ಆರೋಪಿ

ನಯನಾ ಗೌಡ ಈ ಲೇಡಿಗ್ಯಾಂಗ್‌ನ ಕಿಂಗ್‌ ಪಿನ್‌ ಆಗಿದ್ದು, ಕವನಾ, ಗಿರೀಜಾ ಎಂಬ ಮಹಿಳೆಯರೂ ಸೇರಿಕೊಂಡಿದ್ದಾರೆ. ಗ್ರಾಹಕರಿಂದ ಹಣ ಕಟ್ಟಿಸಿಕೊಂಡ ಬಳಿಕ ಲೋನ್‌ ಕೊಡಿಸದೇ, ಹಣವನ್ನೂ ವಾಪಸ್‌ ಕೊಡದೇ ವಂಚಿಸಿದ್ದಾರೆ. ಈ ಕುರಿತು ಸಂತ್ರಸ್ತರು ಬಸವೇಶ್ವರನಗರ, ಕೆ.ಪಿ. ಅಗ್ರಹಾರ, ಶ್ರೀರಾಮ್ ಪುರ, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನಿಖೆ ಬಳಿಕ ಕಿಂಗ್‌ ಪಿನ್‌ ನಯನಾಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನ ಬಯಲಿಗೆಳೆದಿದ್ದಾರೆ. ವಿಚಾರಣೆ ವೇಳೆ ನಯನಾ ಹಲವರ ಹೆಸರು ಬಾಯ್ಬಿಟ್ಟಿದ್ದಿ, ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 15 ಜನರ ಮೇಲೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ನೂರಾರು ಶವಗಳ ಹೂತಿಟ್ಟ ಕೇಸ್ – ಕೋರ್ಟ್‌ನಲ್ಲಿ ಹೊಸ ಕಥೆ ಬಿಚ್ಚಿಟ್ಟ `ಬುರುಡೆ’ ಚಿನ್ನಯ್ಯ