ನವದೆಹಲಿ: ಭಾರತ ನಿನ್ನೆ ಕೊಟ್ಟ ಏಟಿಗೆ ಬೆಚ್ಚಿ ಬಿದ್ದಿರೋ ಪಾಕಿಸ್ತಾನ ಮತ್ತೊಮ್ಮೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಬಂಕರ್‍ಗಳ ನಾಶದಿಂದ ಕಂಗೆಟ್ಟಿರುವ ಪಾಕಿಸ್ತಾನ, ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸ್ತಿದೆಯಾ ಎನ್ನುವ ಪ್ರಶ್ನೆ ಈಗ ಬಲವಾಗುತ್ತಿದೆ.
ಸಿಯಾಚಿನ್ ಪ್ರದೇಶದಲ್ಲಿ ಪಾಕ್ ಸೇನಾ ಚಟುವಟಿಕೆಗಳು ಚುರುಕಾಗಿವೆ. ಸಿಯಾಚಿನ್ ಗ್ಲೇಸಿಯರ್ ಬಳಿ ಪಾಕಿಸ್ತಾನದ ಜೆಟ್ ವಿಮಾನವೊಂದು ಹಾರಾಟ ನಡೆಸಿದೆ. ಅಲ್ಲದೇ ವಾಯುಪಡೆ ಸಮರಾಭ್ಯಾಸ ನಡೆಸುತ್ತಿದ್ದು ಎಲ್ಲಾ ಸೇನಾ ನೆಲೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ಸಿಯಾಚಿನ್ ಬಳಿಯ ಸ್ಕಾರ್ದುವಿನಲ್ಲಿರುವ ಖಾದ್ರಿ ವಾಯುನೆಲೆಗೆ ಭೇಟಿ ನೀಡಿದ್ದ ಪಾಕ್‍ನ ವಾಯುಪಡೆ ಮುಖ್ಯಸ್ಥ ಸೊಯೇಲ್ ಅಮಾನ್, ಮಿರಾಜ್ ಯುದ್ಧ ವಿಮಾನದ ಸಮರಭ್ಯಾಸವನ್ನೂ ವೀಕ್ಷಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಾನ್, ವಿರೋಧಿಗಳ ಯಾವುದೇ ಬೆದರಿಕೆಗಳಿಗೆ ದೇಶದ ಜನರು ವಿಚಲಿತರಾಗಬೇಕಿಲ್ಲ. ಎಲ್ಲ ಸವಾಲುಗಳನ್ನು ಸ್ವೀಕರಿಸಲು ನಮ್ಮ ಸೇನೆ ಸನ್ನದ್ಧವಾಗಿದೆ. ಅವರು ತಲೆಮಾರು ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡ್ತೇವೆ ಅಂತಾ ಧಿಮಾಕಿನ ಮಾತಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ವಾತಾವರಣವೇ ಸೃಷ್ಟಿಯಾದಂತಾಗಿದೆ. ಆದರೆ ಪಾಕಿಸ್ತಾನದಿಂದ ಗಡಿ ಉಲ್ಲಂಘನೆ ಆಗಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.
ಮುಂಬೈಗೆ ಉಗ್ರರು: ಈ ನಡುವೆ 20 ಲಷ್ಕರ್ ಉಗ್ರರು ಮುಂಬೈಗೆ ನುಗ್ಗಿದ್ದಾರೆ. ಯಾವುದೇ ಸಮಯದಲ್ಲೂ ದೆಹಲಿ ಹಾಗೂ ಮುಂಬೈನಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರ ಕೂಡಾ ಹೈ ಅಲರ್ಟ್ ಆಗಿದ್ದು, ಎಲ್ಲಾ ಕಡೆ ಬಿಗಿ ಬಂದೋ ಬಸ್ತ್ ಘೋಷಿಸಿದೆ. ಇನ್ನು ನಾಪತ್ತೆಯಾಗಿರೋ ಸುಖೋಯ್ ವಿಮಾನದ ಬಗ್ಗೆ ನಮಗೆ ಮಾಹಿತಿ ಇಲ್ಲ. ಜನರ ಶಾಂತಿ ಕದಡಬೇಡಿ ಅಂತಾ ಚೀನಾ ಭಾರತಕ್ಕೆ ಹೇಳಿದೆ.
ಇದನ್ನೂ ಓದಿ: 54 ಮುಸ್ಲಿಂ ರಾಷ್ಟ್ರಗಳಿಂದ ಪಾಕ್ ಪ್ರಧಾನಿಗೆ ಅವಮಾನ!
https://twitter.com/miqazi/status/867342209493991425
#Pakistan Mirage jets fly over #Siachen Glacier after #IndianArmy's punitive strikes https://t.co/BPVCLip63a pic.twitter.com/REnlk4ipVz
— ABP News (@ABPNews) May 24, 2017
.@IAF_MCC denies #Pakistan media reports that jets from neighbouring country flew over #Siachen glacier. pic.twitter.com/IzaBH5k2fF
— All India Radio News (@airnewsalerts) May 24, 2017

Leave a Reply