ಕ್ರೀಡಾ ಮೈದಾನದಲ್ಲಿ `ಆಪರೇಷನ್‌ ಸಿಂಧೂರ’ – ಫಲಿತಾಂಶ ಒಂದೇ, ಭಾರತಕ್ಕೆ ಜಯ: ಮೋದಿ ಬಣ್ಣನೆ

ನವದೆಹಲಿ: ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಆಪರೇಷನ್‌ ಸಿಂಧೂರಕ್ಕೆ ಹೋಲಿಸಿ ಭಾರತ ತಂಡವನ್ನು ಅಭಿನಂದಿಸಿದ್ದಾರೆ.

“ಕ್ರೀಡಾ ಮೈದಾನದಲ್ಲಿ ಆಪರೇಷನ್‌ ಸಿಂಧೂರ – ಫಲಿತಾಂಶ ಒಂದೇ, ಭಾರತಕ್ಕೆ ಜಯ” ಎಂದು ಬರೆದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸಿಂಧೂರ ʼತಿಲಕʼ!

ಪಹಲ್ಗಾಮ್‌ ದಾಳಿಯ ನಂತರ ಭಾರತ ನಡೆಸಿದ ಕಾರ್ಯಾಚರಣೆಗೆ `ಆಪರೇಷನ್‌ ಸಿಂಧೂರ’ ಹೆಸರನ್ನು ಇಟ್ಟಿತ್ತು. ಈಗ ತಿಲಕ್‌ ವರ್ಮಾ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ 5 ವಿಕೆಟ್‌ಗಳ ಜಯ ಸಾಧಿಸಿ 9ನೇ ಬಾರಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ.

ವಿಶೇಷ ಏನೆಂದರೆ ಸಿಂಧೂರಕ್ಕೆ ಹೆಸರು ʼತಿಲಕʼ ಎಂಬ ಇನ್ನೊಂದು ಸಮನಾರ್ಥಕ ಪದವಿದೆ. ಹೀಗಾಗಿ ಈಗ ನೆಟ್ಟಿಗರು ಭಾರತ ಸೇನೆ ಪಾಕಿಸ್ತಾನದ ವಿರುದ್ಧ ಆಪರೇಷನ್‌ ಸಿಂಧೂರ ಮಾಡಿದರೆ ಭಾರತೀಯ ಕ್ರಿಕೆಟ್‌ ತಂಡ ಆಪರೇಷನ್‌ ತಿಲಕ್‌ ಮಾಡಿ ಹೊಡೆದು ಹಾಕಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಈ ಬಾರಿಯ ಏಷ್ಯಾಕಪ್‌ನಲ್ಲಿ ಭಾರತ ತಂಡ ಮೂರು ಬಾರಿ ಪಾಕ್‌ ತಂಡವನ್ನು ಎದುರಿಸಿತ್ತು. ಲೀಗ್‌, ಸೂಪರ್‌ 4, ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡೆದಿದ್ದು ಮಾತ್ರವಲ್ಲ ಅಜೇಯವಾಗಿ ಈ ಟೂರ್ನಿ ಮುಗಿಸಿದ್ದು ವಿಶೇಷ.ಇದನ್ನೂ ಓದಿ: ಹ್ಯಾರಿಸ್‌ ರೌಫ್‌ ವಿಕೆಟ್‌ ಉಡೀಸ್‌ ಮಾಡಿ ‘ಪ್ಲೇನ್‌ ಕ್ರ್ಯಾಶ್’‌ ಸನ್ನೆ ಮೂಲಕವೇ ಬುಮ್ರಾ ಟಕ್ಕರ್‌