ಡೇಕೇರ್ ಸೆಂಟರ್‍ಗೆ ಮಕ್ಕಳನ್ನು ಸೇರಿಸೋ ಮೊದಲು ಈ ಸುದ್ದಿ ಓದಿ

ಚಂಡೀಗಢ: ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ತಮ್ಮ ಪುಟ್ಟ ಮಕ್ಕಳನ್ನು ಡೇ ಕೇರ್ ಸೆಂಟರ್ ಗೆ ಸೇರಿಸೋದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಮಕ್ಕಳನ್ನು ಶಿಶುವಿಹಾರಕ್ಕೆ ಸೇರಿಸಿದ ತಂದೆ-ತಾಯಂದಿರುವ ಕೆಲವೊಂದು ಅನಾಹುತಗಳನ್ನು ಎದುರಿಸಿರೋ ಘಟನೆಗಳನ್ನು ಕೇಳಿದ್ದೇವೆ. ಅಂತೆಯೇ ಹರಿಯಾಣದ ಗುರುಗಾಂವ್ ನಲ್ಲಿರೋ ಡೇಕೇರ್ ಸೆಂಟರ್ ನಲ್ಲಿ ಭಾರೀ ಅನಾಹುತವೊಂದು ನಡೆದುಹೋಗಿದೆ.

ಹೌದು. ಗುರುಗಾಂವ್ ನ 44ನೇ ಸೆಕ್ಟರ್ ನಲ್ಲಿರೋ ಫೋರ್ಟಿಸ್ ಮೆಮೋರಿಯಲ್ ಇನ್ಸಿಸ್ಟಿಟ್ಯೂಟ್ ಎಂಬ ಶಿಶು ವಿಹಾರ ಕೇಂದ್ರದಲ್ಲಿ ನೋಡಿಕೊಳ್ಳುವವರ ಅಜಾಗರೂಕತೆಯಿಂದಾಗಿ 9 ತಿಂಗಳ ಮುಗ್ಧ ಮಗು ತನ್ನ ಕೈಯ ಹೆಬ್ಬೆರಳನ್ನೇ ಕಳೆದುಕೊಂಡ ಘಟನೆ ನಡೆದಿದೆ. ಈ ದುರಂತ ಮೇ 19ರಂದು ನಡೆದಿದ್ದು, ಈ ಬಗ್ಗೆ ಮಗುವಿನ ತಾಯಿ ಭಾವ್ನಾ ರಸ್ತೋಗಿ ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನನ್ಯ ಕೈ ಬರಳು ಕಳೆದುಕೊಂಡ ಪುಟಾಣಿ. ಮಕ್ಕಳನ್ನು ನೋಡಿಕೊಳ್ಳುವಾಕೆ ಡೈಪರ್ ಬದಲಾಯಿಸುವ ವೇಳೆ ಅನನ್ಯ ಕೈ ಬಾತ್ ರೋಮ್ ಡೋರ್‍ಗೆ ಸಿಲುಕಿದೆ. ಪರಿಣಾಮ ಆಕೆಯ ಎಡಗೈ ಹೆಬ್ಬೆರಳು ಇಬ್ಭಾಗವಾಗಿದೆ. ಮಗಳ ಕೈಗೆ ಗಾಯವಾಗಿದ್ದರಿಂದ ಮನನನೊಂದ ಅನನ್ಯ ತಾಯಿ ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಶಿಶುವಿಹಾರ ಕೇಂದ್ರದಲ್ಲಿ ಮಕ್ಕಳನ್ನು ಸೇರಿಸೋ ಮುನ್ನ ಎರಡು ಬಾರಿ ಆಲೋಚನೆ ಮಾಡುವಂತೆ ತಿಳಿಸಿದ್ದಾರೆ.

`ಮಗುವಿನ ಕೈ ಬೆರಳಿನ ಸರ್ಜರಿ ಒಂದು ಈಗಾಗಲೇ ಮುಗಿದಿದ್ದು, ಇನ್ನೊಂದು ಸರ್ಜರಿ ಗುರುವಾರ ನಡೆಯಲಿದೆ. ಹೀಗೆ ವಾರಕ್ಕೆ ಎರಡು ಸಲದಂತೆ ಆರು ವಾರಗಳವರೆಗೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ 16,000 ಕೊಟ್ಟು ಮಗುವನ್ನು ಡೇ ಕೇರ್ ಸೆಂಟರ್ ಗೆ ಸೇರಿಸಿದ್ದೇನೆ. ಈ ವೇಳೆ ಅಲ್ಲಿ ಒಳ್ಳೆಯ ಸಿಬ್ಬಂದಿ, ಸಿಸಿಟಿವಿ ಹಾಗೂ ಕೇಂದ್ರದ ಒಳಗಡೆ ಕ್ಲೀನ್ ಇದೆ. ಒಟ್ಟಿನಲ್ಲಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಭರವಸೆ ನಿಡಿದ್ದರು.

ಆದ್ರೆ ಘಟನೆಯ ಬಗ್ಗೆ ಸಿಸಿಟಿ ದೇಶ್ಯಾವಳಿ ತೋರಿಸಿ ಅಂತಾ ಕೇಂದ್ರದ ಮಾಲೀಕರನ್ನು ಕೇಳಿದ್ರೆ ಅವರು ಸೂಕ್ತ ಪ್ರತಿಕ್ರಿಯೆ ನೀಡುತ್ತಿಲ್ಲ. ಅಲ್ಲದೇ ಘಟನೆ ನಡೆದ ವೇಳೆ ಸಿಸಿಟಿವಿ ಅಚಾನಕ್ ಆಗಿ ಆಫ್ ಆಗಿತ್ತು. ಹೀಗಾಗಿ ಆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ ಅಂತಾ ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ನಿಜವಾಗಿ ಅಲ್ಲಿ ನಡೆದಿರುವ ಘಟನೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಅಂತಾ ಮಗುವಿನ ತಾಯಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತನ್ನ ಪೋಸ್ಟ್ ಮೂಲಕ ಪೊಲೀಸರನ್ನು ಆಗ್ರಹಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಹರಿಯಾಣದ ಗೌರವಾನ್ವಿತ ಮುಖ್ಯಮಂತ್ರಿ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮನವಿ ಮಾಡಿದ್ದಾರೆ. ಇನ್ನು ಪತ್ರಕರ್ತರಿಗೂ ಶಿಶು ಕೇಂದ್ರದ ಈ ದುರದೃಷ್ಟಕರ ಕಥೆಯನ್ನು ವರದಿ ಮಾಡುವಂತೆ ಕೇಳಿಕೊಂಡಿದ್ದಾರೆ.

ಭಾನುವಾರ ಇವರು ಪೋಸ್ಟ್ ಪ್ರಕಟಿಸಿದ್ದು, ಈ ಪೋಸ್ಟನ್ನು 2 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *