ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

ದುಬೈ: ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಿನ ಏಷ್ಯಾಕಪ್ ಸೂಪರ್ 4 ಪಂದ್ಯ ಸ್ಲೆಡ್ಜಿಂಗ್‌ಗೆ (ಕೆಣಕುವ) ವೇದಿಕೆಯಾಗಿ ಮಾರ್ಪಟ್ಟಿದೆ.

ಭಾರತ ಬ್ಯಾಟಿಂಗ್ ವೇಳೆ ಅಭಿಷೇಕ್ ಶರ್ಮಾ (Abhishek Sharma) ಹಾಗೂ ಪಾಕಿಸ್ತಾನದ ಹ್ಯಾರಿಸ್ ರೌಫ್ ವಾಗ್ವಾದ ನಡೆಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಬ್ಯಾಟಿಂಗ್ ವೇಳೆ ಶಾಹೀಬ್‌ಜಾದ್ ಫರ್ಹಾನ್ (Sahibzada Farhan) ಫಿಫ್ಟಿ ಬಾರಿಸಿದ ನಂತರ ಮಾಡಿದ ಸಂಭ್ರಮಾಚರಣೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಫರ್ಹಾನ್‌ನ ಈ ಸೆಲೆಬ್ರೇಷನ್‌ ಪಹಲ್ಗಾಮ್‌ ಉಗ್ರರು (Pahalgam Terrorist) ನಡೆಸಿದ ದಾಳಿಯ ಸಂತ್ರಸ್ತರು ಸೇರಿ ಸಮಸ್ತ ಭಾರತೀಯರನ್ನು ಅಣಕಿಸಿದ್ರಾ ಅನ್ನೋ ಅನುಮಾನ ಕಾಡತೊಡಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆಯಾಗುತ್ತಿದೆ.

ವಿವಾದದ ಕಿಡಿ ಹಚ್ಚಿದ ಗನ್‌ ಸೆಲಬ್ರೇಷನ್‌
ಭಾರತ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಹೀಬ್‌ಜಾದ್ ಫರ್ಹಾನ್ ಉತ್ತಮ ಆರಂಭ ನೀಡಿದ್ದರು. ಅಬ್ಬರಿಸಿದ ಶಾಹೀಬ್‌ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹಾಫ್ ಸೆಂಚುರಿ ಸಂಭ್ರಮವನ್ನು ಶಾಹೀಬ್‌ಜಾದ್ ಫರ್ಹಾನ್, ಭಾರತೀಯ ತಂಡದ ಡೌಗ್‌ಕಡೆ ಬ್ಯಾಟ್ ತೋರಿಸಿ ಗನ್ ಫೈರಿಂಗ್ ರೀತಿ ಸಂಭ್ರಮಿಸಿದರು. ಬ್ಯಾಟನ್ನೇ ಏಕೆ-47 ಗನ್ ರೀತಿ ತೋರಿಸಿ, ಫೈರಿಂಗ್ ಮಾಡಿದ ರೀತಿಯಲ್ಲಿ ಸಂಭ್ರಮಿಸಿದರು. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸೋಷಿಯಲ್‌ ಮೀಡಿಯಾಗಳಲ್ಲಿ ನೆಟ್ಟಿಗರು ಪಹಲ್ಗಾಮ್‌ ಉಗ್ರರಿಗೆ ಹೋಲಿಸಿದ್ದಾರೆ. ಆರಂಭದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಫರ್ಹಾನ್‌ 45 ಎಸೆತಗಳಲ್ಲಿ 58 ರನ್ ಗಳಿಸಿದರು.