ಟಾಕ್ಸಿಕ್‌ ಫೈನಲ್‌ ಶೂಟಿಂಗ್‌ ಮುನ್ನ ಲಂಡನ್‌ಗೆ ಹಾರಿದ ಯಶ್!

ಟಾಕ್ಸಿಕ್‌ (Toxic) ಚಿತ್ರದ ಫೈನಲ್‌ ಹಂತದ ಚಿತ್ರೀಕರಣಕ್ಕೂ ಮುನ್ನ ರಾಕಿಂಗ್‌ ಸ್ಟಾರ್‌ ಯಶ್‌ (Yash) ಲಂಡನ್‌ಗೆ ಹಾರಿದ್ದಾರೆ.

ಟಾಕ್ಸಿಕ್ ಸಿನಿಮಾದ ಆ್ಯಕ್ಷನ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಲಿವುಡ್‌ನ ಜೆಜೆ ಪರ‍್ರಿ 45 ದಿನಗಳ ಕಾಲ ಮುಂಬೈನಲ್ಲಿ (Mumbai) ಬೀಡುಬಿಟ್ಟು ಫೈಟ್ ಸೀನ್‌ ಮುಗಿಸಿಕೊಟ್ಟಿದ್ದಾರೆ. ಇದೀಗ ಕೊನೆಯ ಹಂತದ ಚಿತ್ರೀಕರಣ ಮಾತ್ರವೇ ಬಾಕಿ ಇದ್ದು ಅದು ಬೆಂಗಳೂರಿನಲ್ಲಿ ನಡೆಯಲಿದೆ. ಇದನ್ನೂ ಓದಿ: ಇದ್ರೆ ನೆಮ್ಮದಿಯಾಗಿ ಇರ್ಬೇಕು ಎಂದ ವೈಷ್ಣವಿಗೌಡ ದಪ್ಪ ಆಗಿದ್ದೀರಾ ಅಂದ್ರು ಫ್ಯಾನ್ಸ್

ಸೆಪ್ಟೆಂಬರ್ ಕೊನೆಯ ವಾರದಿಂದ ಟಾಕ್ಸಿಕ್ ಫೈನಲ್ ಹಂತದ ಚಿತ್ರೀಕರಣ ನಡೆಯಲಿದೆ. ಅದಕ್ಕೂ ಮುನ್ನ ಬಿಸಿನೆಸ್ ಮೀಟಿಂಗ್ ಸಂಬಂಧ ಯಶ್‌ ಲಂಡನ್‌ಗೆ (London) ಹಾರಿದ್ದಾರೆ. ಈಗಾಗಲೇ `ಟಾಕ್ಸಿಕ್’ ಸಿನಿಮಾ ಅಮೆರಿಕದಲ್ಲಿ ಹಾಲಿವುಡ್ ಜೊತೆ ವ್ಯವಹಾರದ ಸಹಯೋಗ ಮಾಡಿಕೊಂಡಿದ್ದು ಇಂಗ್ಲೀಷ್‌ನಲ್ಲೂ ತಯಾರಾಗುತ್ತಿದೆ. ಇದನ್ನೂ ಓದಿ:  ನಾನು ಕಷ್ಟಪಟ್ಟು ತಗೊಂಡಿರೋ ಮನೆ ಅವನಿಗ್ಯಾಕೆ ಗಿಫ್ಟ್ ತರ ಬಿಟ್ಕೊಡ್ಲಿ – ರಂಜಿತ್ ಅಕ್ಕ ರಶ್ಮಿ

ಇದೀಗ ಇಂಗ್ಲೆಂಡ್‌ಗೆ ತೆರಳಿರುವ ಯಶ್ ಮಹತ್ವದ ಸಹಯೋಗ ಮಾಡುವ ಸಂಬಂಧ ಸಭೆ ನಡೆಸಿ ಬೆಂಗಳೂರಿಗೆ ಮರಳಲಿದ್ದಾರೆ. ಗುರುವಾರ ರಾತ್ರಿ ಯಶ್ ಮುಂಬೈನಿಂದ ಲಂಡನ್‌ಗೆ ತೆರೆಳುವ ವೇಳೆ ದೃಶ್ಯ ಸೆರೆಯಾಗಿದೆ.

ಟಾಕ್ಸಿಕ್ ಲುಕ್‌ನಲ್ಲೇ ಇರುವುದರಿಂದ ಮುಖ ಮರೆಮಾಚಲು ಯಶ್‌ ಮಾಸ್ಕ್ ಧರಿಸಿದ್ದಾರೆ. ಯಶ್ ಈಗಾಗಲೇ ಹೇಳಿದಂತೆ `ಟಾಕ್ಸಿಕ್’ ಚಿತ್ರವನ್ನು ಗ್ಲೋಬಲ್ ಚಿತ್ರವನ್ನಾಗಿ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.