ಉದ್ಯಮ ಆರಂಭಿಸಲು ಆಸಕ್ತಿ ಇರುವ ಮಹಿಳೆಯರಿಗೆ ಗುಡ್ ನ್ಯೂಸ್!

– ಮಹಿಳಾ ಉದ್ಯಮಿಗಳಿಗಾಗಿ `ಉದ್ಯೋಗ್ ಸಖಿ’ ಪೋರ್ಟಲ್

ಬೆಂಗಳೂರು: ಹೊಸದಾಗಿ ಉದ್ಯಮ ಆರಂಭಿಸುವ ಕನಸು ಹೊತ್ತ ಮಹಿಳೆಯರಿಗೆ ಗುಡ್ ನ್ಯೂಸ್. ಮಹಿಳಾ ಉದ್ಯಮಿಗಳಿಗಾಗಿ ʻಉದ್ಯೋಗ್ ಸಖಿʼ ಪೋರ್ಟಲ್ ಇದೆ. ಇದು ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು, ನಿರ್ಮಿಸಲು ಮತ್ತು ಬೆಳೆಸಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ. ಉದ್ಯೋಗ್ ಸಖಿ ಪೋರ್ಟಲ್‌ನಲ್ಲಿ 4,535 ಮಹಿಳೆಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.

https://udyamsakhi.com/ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (ಎಂಎಸ್‌ಎಂಇ) ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ವಿವಿಧ ಹಣಕಾಸು ಯೋಜನೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಬೆಂಬಲ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದನ್ನೂ ಓದಿ: ಸೋರುತಿದೆ ಬಂಕಾಪುರ ಆರೋಗ್ಯ ಕೇಂದ್ರದ ಕಟ್ಟಡ – ನೀರು ಬೀಳುತ್ತಿರುವ ಬೆಡ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ

ಈ ಪೋರ್ಟಲ್ ಮಹಿಳಾ ಉದ್ಯಮಿಗಳಿಗೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು, ನಿರ್ಮಿಸಲು ಮತ್ತು ಬೆಳೆಸಲು ಮತ್ತು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ. ಇದು ಪಿಎಂಇಜಿಪಿಯಂತಹ ಎಂಎಸ್‌ಎಂಇ ಸಚಿವಾಲಯದ ಹಣಕಾಸು ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಸಿಜಿಟಿಎಂಎಸ್‌ಇ, ಮುದ್ರಾ, ಟ್ರೇಡ್ಸ್ ಇತ್ಯಾದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದೆ.

ಎಂಎಸ್‌ಎಂಇ ಸಚಿವಾಲಯ ಮತ್ತು ಇತರ ಕೇಂದ್ರ ಸಚಿವಾಲಯಗಳ ನೀತಿಗಳು ಮತ್ತು ಕಾರ್ಯಕ್ರಮಗಳು. ವ್ಯವಹಾರ ಯೋಜನೆ ತಯಾರಿಕೆಯ ಬಗ್ಗೆ ಮಾಹಿತಿ. ದೇಶದ ಆಯಾ ರಾಜ್ಯಗಳಲ್ಲಿನ ಎಂಎಸ್‌ಎಂಇ ಸಚಿವಾಲಯದ ನೋಡಲ್ ಕಚೇರಿಗಳು / ಬೆಂಬಲ ಸಂಸ್ಥೆಗಳ ವಿವರಗಳು ಸಿಗಲಿದೆ. ಇದನ್ನೂ ಓದಿ: ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

ಎಂಎಸ್‌ಎಂಇ ಸಚಿವಾಲಯ ಆಯೋಜಿಸುವ ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯೂ ಇದ್ರಲ್ಲಿ ಲಭ್ಯವಾಗಲಿದೆ.

ಈವರೆಗೆ ಒಟ್ಟು 4535 ಮಹಿಳೆಯರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 2018ನೇ ಸಾಲಿನಲ್ಲಿ ಉದ್ಯೋಗ ಸಖಿ ಪೋರ್ಟಲ್ ಅಭಿವೃದ್ಧಿಗಾಗಿ 43.52 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.