ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಿಶ್ವ ಸಂಸ್ಥೆಯ ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‍ನಲ್ಲಿ ಭಾರತದ ಪರವಾಗಿ ವಾದ ಮಾಡಲು ವಕೀಲರಾದ ಹರೀಶ್ ಸಾಳ್ವೆ ಎಷ್ಟು ಸಂಭವನೆ ಪಡೆಯುತ್ತಿದ್ದಾರೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಹಿರಂಗಪಡಿಸಿದ್ದಾರೆ.
ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ತಡೆ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ, ಯಾವುದೇ ಒಳ್ಳೆಯ ಭಾರತೀಯ ವಕೀಲರಾದ್ರೂ ಇದೇ ಕೆಲಸವನ್ನ ಮಾಡ್ತಿದ್ರು. ಹಾಗೂ ಹರೀಶ್ ಸಾಳ್ವೆ ಅವರಿಗಿಂತ ಕಡಿಮೆ ಸಂಭಾವನೆ ಪಡೆದು ಮಾಡುತಿದ್ರು. ತೀರ್ಪಿಗಾಗಿ ಕಾಯೋಣ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಇದು ಸರಿಯಲ್ಲ. ಹರೀಶ್ ಸಾಳ್ವೆ ಅವರು ನಮ್ಮಿಂದ ಕೇವಲ 1 ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
https://twitter.com/goyalsanjeev/status/864160971350134784
Not fair. #HarishSalve has charged us Rs.1/- as his fee for this case. https://t.co/Eyl3vQScrs
— Sushma Swaraj (@SushmaSwaraj) May 15, 2017
ಗೂಢಚಾರಿಕೆ ಆರೋಪದ ಮೇಲೆ ಜಾಧವ್ ಅವರಿಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಭಾರತದ ಮನವಿಯನ್ನ ಹೇಗೆ ಮಂಡಿಸಬೇಕು ಎಂಬ ಬಗ್ಗೆ ಭಾರತದ ಮಾಜಿ ಸಾಲಿಸಿಟರ್ ಜೆನರಲ್ ಹರೀಶ್ ಸಾಳ್ವೆ ಇಂದು ಒಂದೂವರೆ ಗಂಟೆಗಳ ಕಾಲ ಮಾತನಾಡಿದ್ರು.
ಜಾಧವ್ ಅವರ ಗಲ್ಲು ಶಿಕ್ಷೆಯನ್ನ ಪ್ರಶ್ನಿಸಿ ಕಳೆದ ವಾರ ಭಾರತ ಇಂಟರ್ ನ್ಯಾಷನಲ್ ಕೋರ್ಟ್‍ನ ಮೊರೆ ಹೋಗಿತ್ತು. ಕೋರ್ಟ್ ತೀರ್ಮಾನಕ್ಕೂ ಮುನ್ನವೇ ಜಾಧವ್ ಅವರಿಗೆ ಶಿಕಗ್ಷೆಯಾಗಬಹುದೆಂಬ ಆತಂಕವಿತ್ತು. ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು ಹಾಗೂ ಅವಸರವಿತ್ತು. ಆದ್ದರಿಂದ ನಾವು ಬೇಗನೆ ಕೋರ್ಟ್ ಮೊರೆ ಹೋದೆವು ಎಂದು ಹರೀಶ್ ಸಾಳ್ವೆ ಹೇಳಿದ್ದಾರೆ.

Leave a Reply