ಇತ್ತ `ಡಿ’ ಫ್ಯಾನ್ಸ್ ಜಟಾಪಟಿ – ಅತ್ತ ಕಾಮಾಕ್ಯದಲ್ಲಿ ದರ್ಶನ್

ಟ ದರ್ಶನ್ (Darshan) ಪ್ರಸಿದ್ಧ ಕಾಮಾಕ್ಯ ದೇವಿಯ ಶಕ್ತಿಪೀಠಕ್ಕೆ ತೆರಳಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಸುಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ (Kamakhya Devi temple) ದರ್ಶನ್, ಪತ್ನಿ ವಿಜಯಲಕ್ಷ್ಮಿ ಜೊತೆ ತೆರಳಿದ್ದಾರೆ. ದೇವಿಗೆ ಹರಕೆ ತೀರಿಸಿದ್ದಾರೆ.

ಸಂಕಷ್ಟದಲ್ಲಿರುವ ದರ್ಶನ್ ದೇವಿಯ ಮೊರೆ ಹೋಗಿದ್ದಾರೆ. ಶೀಘ್ರದಲ್ಲೇ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಕುರಿತು ಆದೇಶ ಪ್ರಕಟವಾಗಲಿದ್ದು ದರ್ಶನ್‌ಗೆ ಇದು ಸಂದಿಗ್ಧ ಸ್ಥಿತಿ. ದರ್ಶನ್ ಜೈಲಲ್ಲಿದ್ದಾಗ ವಿಜಯಲಕ್ಷ್ಮಿ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸಿಕೊಂಡು ಬಂದಿದ್ದರು. ಇದೀಗ ಪತಿಯೊಂದಿಗೆ ತೆರಳಿ ಶಕ್ತಿದೇವಿಗೆ ಮತ್ತೆ ಮೊರೆಹೋಗಿದ್ದಾರೆ. ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳುವ ವೀಡಿಯೋ ರಿವೀಲ್ ಆಗಿದೆ. ಇದನ್ನೂ ಓದಿ: ಶಿರೂರು ಭೂಕುಸಿತ ದುರಂತ; ಮಲೆಯಾಳಂನಲ್ಲಿ ಸಿನಿಮಾ ಸಟ್ಟೇರಲು ಸಿದ್ಧತೆ

ಇತ್ತ ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ನಟ ಪ್ರಥಮ್ ಸೇರಿ ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ. ದರ್ಶನ್ ಅವರಿಗೆ ಬುದ್ಧಿ ಹೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ದರ್ಶನ್ ಇದೀಗ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇದನ್ನೂ ಓದಿ: 11 ದಿನದಲ್ಲಿ 250 ಕೋಟಿ ರೂ. ದಾಟಿದ `ಸೈಯಾರಾ’ ಕಲೆಕ್ಷನ್

ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ನಿಂದ ಆದೇಶ ಹೊರಬೀಳಲಿದ್ದು ದರ್ಶನ್‌ಗೆ ಭಾರಿ ಆತಂಕ ಇರುವಂತೆ ಕಾಣುತ್ತಿದೆ. ಈ ಹೊತ್ತಲ್ಲಿ ಕಾಮಾಕ್ಯದೇವಿಯ ದರ್ಶನ ಪಡೆದಿದ್ದಾರೆ ನಟ ದರ್ಶನ್. ಮರಳಿ ಬಂದ ಬಳಿಕ ಅಭಿಮಾನಿಗಳಿಗೆ ಬುದ್ಧಿ ಹೇಳ್ತಾರಾ? ಅಥವಾ ಸುಮ್ಮನಾಗ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ.